ಮೂರೇ ವಾರಕ್ಕೆ ಲಾಯರ್ ಜಗದೀಶ್ ಬಿಗ್ ಬಾಸ್​ನಲ್ಲಿ ಮಾಡಿರುವ ಅವಾಂತರಗಳು ಒಂದೆರಡಲ್ಲ

|

Updated on: Oct 16, 2024 | 3:01 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಅಲ್ಲ, ಕೈಕೈ ಮಿಲಾಯಿಸಿ ನಡೆದ ಕುಸ್ತಿ. ಈ ಕಾರಣದಿಂದಲೇ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ವರದಿ ಹರಿದಾಡಿದೆ.

1 / 6
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದರು. ಅವರು ಎರಡೂವರೆ ವಾರಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಈ ಅವಧಿಯಲ್ಲಿ ಅವರು ಸಾಕಷ್ಟು ಅವಾಂತರ ಮಾಡಿಕೊಂಡಿದ್ದರು.

2 / 6
‘ಬಿಗ್ ಬಾಸ್’ ಮನೆಯಿಂದ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಅವರು ಫೈಟ್ ಮಾಡಿಕೊಂಡು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರಂತೆ.

3 / 6
‘ಬಿಗ್ ಬಾಸ್​’ನ ಎಕ್ಸ್​ಪೋಸ್ ಮಾಡ್ತೀನಿ ಎಂದು ಹೊರಟಿದ್ದರು ಜಗದೀಶ್. ಅಲ್ಲದೆ, ಬಿಗ್ ಬಾಸ್​ನೇ ಖರೀದಿ ಮಾಡುವ ಆಲೋಚನೆಯೂ ಅವರಿಗೆ ಬಂದಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

4 / 6
ಇದಲ್ಲದೆ, ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಿಯೂ ಚರ್ಚೆ ಹುಟ್ಟುಹಾಕಿದ್ದರು. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆ ಎದುರಿಸಬೇಕಾಗಿ ಬಂದಿತ್ತು. ಅನೇಕರು ಇದನ್ನು ವಿರೋಧಿಸಿದ್ದರು.

5 / 6
ವೀಕೆಂಡ್​ನಲ್ಲಿ ಸುದೀಪ್ ಅವರ ಕಿವಿಮಾತಿನಿಂದ ಅವರು ಬದಲಾಗುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಈ ಬದಲಾವಣೆ ಹೆಚ್ಚು ದಿನ ಇರಲಿಲ್ಲ. ಅವರು ಮತ್ತೆ ಮೊದಲಿನಂತೆ ಆದರು. ಇದರ ಪರಿಣಾಮವನ್ನು ಅವರು ಎದುರಿಸಿದ್ದಾರೆ.

6 / 6
ಈ ವಾರ ಅವರು ಬಿಗ್ ಬಾಸ್​ಗೆ ಅವಮಾನ ಮಾಡಿದ್ದಾರೆ. ಈಗ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ. ರಂಜಿತ್ ಹಾಗೂ ಜಗದೀಶ್ ಮಧ್ಯೆ ಆದ ಫೈಟ್​ನಿಂದ ಅವರು ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.