AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC New Jeevan Shanti Plan 858: ಎಲ್​ಐಸಿ ಜೀವನ್​ ಶಾಂತಿ ಪಾಲಿಸಿ; ತಿಂಗಳಿಗೆ ಒಂದು ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?

ಭಾರತೀಯ ಜೀವ ವಿಮಾ ನಿಗಮವು ‘ಎಲ್​ಐಸಿ ನ್ಯೂ ಜೀವನ್​ ಶಾಂತಿ ಪಾಲಿಸಿ’ಯ ವರ್ಷಾಶನ (Annuity) ದರ ಮತ್ತು ಪಾಲಿಸಿಯನ್ನು ಪರಿಷ್ಕರಿಸಿದ್ದು, 2023ರ ಜನವರಿ 5ರಿಂದ ಜಾರಿಗೆ ಬಂದಿದೆ. ಈ ಯೋಜನೆಯಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯುವುದು ಹೇಗೆಂಬ ಲೆಕ್ಕಾಚಾರ ಇಲ್ಲಿದೆ.

TV9 Web
| Edited By: |

Updated on: Jan 18, 2023 | 6:55 PM

Share
LIC New Jeevan Shanti Plan 858 calculator get Rs 1 lakh monthly pension

‘ನ್ಯೂ ಜೀವನ್​ ಶಾಂತಿ ಪಾಲಿಸಿ’ಯ ವರ್ಷಾಶನ (Annuity) ದರ ಮತ್ತು ಪಾಲಿಸಿಯನ್ನು ಎಲ್​ಐಸಿ ಪರಿಷ್ಕರಣೆ ಮಾಡಿದ್ದು, 2023ರ ಜನವರಿ 5ರಿಂದ ಅಸ್ತಿತ್ವಕ್ಕೆ ಬಂದಿದೆ. ಪರ್ಚೇಸ್ ಪ್ರೈಸ್​ ಮೇಲಿನ ಭತ್ಯೆಯನ್ನೂ ಹೆಚ್ಚಿಸಲಾಗಿದೆ. 1000 ರೂ. ಪರ್ಚೇಸ್​​ ದರಕ್ಕೆ 3 ರೂ.ನಿಂದ 9.75 ರೂ.ವರೆಗೆ ಭತ್ಯೆ ನೀಡಲಾಗುತ್ತಿದೆ.

1 / 7
LIC New Jeevan Shanti Plan 858 calculator get Rs 1 lakh monthly pension

‘ಎಲ್​ಐಸಿ ನ್ಯೂ ಜೀವನ್​ ಶಾಂತಿ ಪಾಲಿಸಿ’ ಏಕ ಪ್ರೀಮಿಯಂ ಆಗಿದ್ದು, ಏಕ ಅಥವಾ ಜಂಟಿ ಆ್ಯನುಯಿಟಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

2 / 7
LIC New Jeevan Shanti Plan 858 calculator get Rs 1 lakh monthly pension

ಸ್ವಯಂ ಉದ್ಯೋಗಿಗಳಿಗೆ ಮತ್ತು ವೃತ್ತಿಪರರಿಗೆ ನಿವೃತ್ತಿ ಜೀವನಕ್ಕಾಗಿ ಒಂದು ಬಾರಿಯ ಹೂಡಿಕೆ ಮಾಡಲು ಇದೊಂದು ಉತ್ತಮ ಯೋಜನೆಯಾಗಿದೆ. ಡಿಫರ್ಡ್ ಆ್ಯನುಯಿಟಿ ಯೋಜನೆಯಾಗಿರುವುದರಿಂದ ಯುವ ವೃತ್ತಿಪರರು ಆರಂಭಿಕ ಹಂತದಿಂದಲೇ ತಮ್ಮ ನಿವೃತ್ತಿಗಾಗಿ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು ಎಂದು ಎಲ್​ಐಸಿ ಹೇಳಿದೆ.

3 / 7
LIC New Jeevan Shanti Plan 858 calculator get Rs 1 lakh monthly pension

1,03,30,578 ರೂ. (1,85,950 ರೂ. ಜಿಎಸ್​ಟಿ) ಪ್ರೀಮಿಯಂ ಖರೀದಿಸಿದರೆ 12 ವರ್ಷಗಳ ಡಿಫರ್ಡ್ ಆ್ಯನುಯಿಟಿಯೊಂದಿಗೆ ತಿಂಗಳಿಗೆ 1.08 ಲಕ್ಷ ರೂ. ಪಿಂಚಣಿ ಪಡೆಯಬಹುದಾಗಿದೆ. ಕನಿಷ್ಠ 30 ವರ್ಷ ವಯಸ್ಸಿನ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ.

4 / 7
LIC New Jeevan Shanti Plan 858 calculator get Rs 1 lakh monthly pension

ತಿಂಗಳಿಗೆ 1,08,058 ರೂ, ತ್ರೈಮಾಸಿಕ ಅವಧಿಗಾದರೆ 3,27,550 ರೂ, ಅರ್ಧ ವಾರ್ಷಿಕ ಅವಧಿಗಾದರೆ 6,61,854 ರೂ, ವರ್ಷಕ್ಕಾದರೆ 13,50,723 ರೂ. ಪಿಂಚಣಿ ಪಡೆಯಬಹುದಾಗಿದೆ.

5 / 7
LIC New Jeevan Shanti Plan 858 calculator get Rs 1 lakh monthly pension

ತಿಂಗಳಿಗೆ ಶೇ 12.33, ತ್ರೈಮಾಸಿಕ ಅವಧಿಗಾದರೆ ಶೇ 12.46, ಅರ್ಧ ವಾರ್ಷಿಕ ಅವಧಿಗಾದರೆ ಶೇ 12.59 ಮತ್ತು ವರ್ಷಕ್ಕೆ ಶೇ 12.84ರ ಬಡ್ಡಿ ‘ಎಲ್​ಐಸಿ ನ್ಯೂ ಜೀವನ್​ ಶಾಂತಿ ಪಾಲಿಸಿ’ಯಲ್ಲಿ ದೊರೆಯುತ್ತದೆ.

6 / 7
LIC New Jeevan Shanti Plan 858 calculator get Rs 1 lakh monthly pension

ಈ ಪಾಲಿಸಿಯ ಕನಿಷ್ಠ ಖರೀದಿ ದರ 1,50,000 ರೂ. ಆಗಿದೆ. ಗರಿಷ್ಠ ಖರೀದಿ ದರ ನಿಗದಿಪಡಿಸಿಲ್ಲ. ಈ ಪಾಲಿಸಿ ಹೊಂದಲು ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. 79 ವರ್ಷ ವಯಸ್ಸಿನ ವರೆಗೆ ಪಾಲಿಸಿ ಹೊಂದಲು ಅವಕಾಶವಿದೆ.

7 / 7
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ