- TV9 Kannada Kannada News Photos List of movies and Web series releasing on OTT this week till May 05
ಕನ್ನಡ ಸೇರಿದಂತೆ ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು
OTT Release this week: ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷಿಸುತ್ತಿವೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಇದು ನಿಜವೂ ಹೌದು. ಕನ್ನಡದ ಸ್ಟಾರ್ ನಟರ ಸಿನಿಮಾಗಳನ್ನು ಖರೀದಿಸಲು ಸಹ ಒಟಿಟಿಗಳು ಹಿಂದೆ-ಮುಂದೆ ನೋಡುತ್ತವೆ. ಆದರೆ ಕಳೆದ ಕೆಲ ವಾರಗಳಿಂದ ಪ್ರತಿವಾರವೂ ಕನ್ನಡ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಈ ವಾರವೂ ಸಹ ಎರಡು ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಿದೆ ಪಟ್ಟಿ...
Updated on: May 03, 2025 | 1:05 PM

ಮಲಯಾಳಂ ಸಿನಿಮಾ ‘ಬ್ರೋಮ್ಯಾನ್ಸ್’ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದ್ದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದೀಗ ಸೋನಿ ಲಿವ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ನವಾಜುದ್ಧೀನ್ ಸಿದ್ಧಿಖಿ ನಟನೆಯ ‘ಕೋಸ್ಟೊ’ ಸಿನಿಮಾ ಜೀ5ನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ನಿಜ ವ್ಯಕ್ತಿಯ ಜೀವನ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕಸ್ಟಮ್ಸ್ ಅಧಿಕಾರಿ ಕೋಸ್ಟೊ ಫರ್ನಾಂಡೀಸ್ ಅವರ ಕರ್ತವ್ಯ ನಿಷ್ಠೆ, ಧೈರ್ಯದಿಂದ ದೊಡ್ಡ ಚಿನ್ನ ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ವಿಕ್ಕಿ ನಿರ್ದೇಶನ ಮಾಡಿ ನಟನೆ ಸಹ ಮಾಡಿದ್ದ ‘ಕಾಲಾಪತ್ಥರ್’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ವಿಮರ್ಶಕರಿಂದ ಮೆಚ್ಚುಗೆ ಸಹ ಪಡೆದಿತ್ತು. ಚಿತ್ರಮಂದಿರದಲ್ಲಿ ಸಾಧಾರಣ ಪ್ರದರ್ಶನ ಕಂಡ ಈ ಸಿನಿಮಾ ಇದೀಗ ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ಬಿಡುಗಡೆಗೆ ಮುನ್ನ ಟ್ರೈಲರ್, ಸಿನಿಮಾದ ಹೆಸರು ಹಾಗೂ ಪ್ರಚಾರದಿಂದ ಸಖತ್ ಸದ್ದು ಮಾಡಿದ್ದ ಸಿನಿಮಾ ‘ಕೆರೆಬೇಟೆ’. ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ‘ಕೆರೆಬೇಟೆ’ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾ ನೋಡಲು ಬಯಸುವವರು 99 ರೂಪಾಯಿ ಪಾವತಿಸಬೇಕು.

ಹೊಸ ಹಿಂದಿ ವೆಬ್ ಸರಣಿ ‘ಕುಲ್’ ಇದೇ ವಾರ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ. ಒಂದು ರಾಯಲ್ ಕುಟುಂಬದ ಹಿರಿಯ ವ್ಯಕ್ತಿ ನಿಧನ ಹೊಂದಿದ ಬಳಿಕ ಆ ಮನೆಯಲ್ಲಿ ಅಧಿಕಾರಕ್ಕಾಗಿ, ಆಸ್ತಿಗಾಗಿ ನಡೆಯುವ ಘಟನೆಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



