
ನಟ ಡಾಲಿ ಧನಂಜಯ್ ಅವರು ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಕ್ಕು ಚಲಾಯಿಸಿದ್ದಾರೆ.

ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಅವರು ಮುಂಜಾನೆಯೇ ಮತ ಚಲಾಯಿಸಲು ಆಗಮಿಸಿದ್ದರು. ವೋಟ್ ಹಾಕಿದ ಬಳಿಕ ಅವರು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ.

ನಟ ಶ್ರೀಮುರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜೊತೆ ಬಂದು ಅವರು ಮತ ಚಲಾಯಿಸಿದ್ದಾರೆ.

ದೊಡ್ಮನೆಯ ಯುವ ರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಅವರು ಮತದಾನ ಮಾಡಿದರು. ಆ ಬಳಿಕ ವೋಟ್ ಮಾಡುವಂತೆ ಅವರು ಅಭಿಮಾನಿಗಳ ಬಳಿ ಕೋರಿದರು.

ನಟ ಜಗ್ಗೇಶ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಒಂದು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಂತು ಮತ ಹಾಕಿದರು ಅನ್ನೋದು ವಿಶೇಷ.

ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ನಲ್ಲಿ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ ಮತದಾನ ಮಾಡಿದರು. ಆ ಸಂದರ್ಭದ ಫೋಟೋ ಇಲ್ಲಿದೆ.

ರ‍್ಯಾಪರ್ ಚಂದನ್ ಶೆಟ್ಟಿ ಅವರು ಸಾಂಗ್ಗಳ ಮೂಲಕ ಮಿಂಚಿದವರು. ಅವರು ವೋಟ್ ಮಾಡಿದ್ದಾರೆ.

ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ಮತದಾನ ಮಾಡಿದ್ದಾರೆ. ಪತ್ನಿಯ ಜೊತೆ ಅವರು ಮತ ಹಾಕಿದ್ದಾರೆ.

ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ಆಗಮಿಸಿ ಮತ ಹಾಕಿದರು.
Published On - 11:59 am, Fri, 26 April 24