- Kannada News Photo gallery Lokayukta raids on bjp mla madal virupakshappa son prashanth rs 7.20 crore Found In Office And Bengaluru House
ಬಿಜೆಪಿ ಶಾಸಕ ಪುತ್ರನ ಮನೆ-ಕಚೇರಿಯಲ್ಲಿ ಕಂತೆ ಕಂತೆ ಹಣ ಪತ್ತೆ, ಇದೇನು ಮನೆಯೋ ಇಲ್ಲ ರಿಸರ್ವ್ ಬ್ಯಾಂಕೋ? ಫೋಟೋಗಳಲ್ಲಿ ನೋಡಿ
ಚೆನ್ನಗಿರಿ ಬಿಜೆಪಿ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ(ಕೆಎಸ್ ಡಿಎಲ್) ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮನೆ ಹಾಗೂ ಕಚೇರಿಯಲ್ಲಿ ಕೈ ಇಟ್ಟಲೆಲ್ಲ ಕಂತೆ ಕಂತೆ ಹಣ ಸಿಕ್ಕಿವೆ. ಸಂಜಯ್ ನಗರದ ನಿವಾಸದಲ್ಲಿ ಮೊಗೆದಷ್ಟೂ ಬರ್ತಿದೆ. ಎಲ್ಲೆಲ್ಲೂ ಕಂತೆ ಕಂತೆ ಹಣ ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.
Updated on:Mar 03, 2023 | 9:54 AM

ಚೆನ್ನಗಿರಿ ಬಿಜೆಪಿ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ(ಕೆಎಸ್ ಡಿಎಲ್) ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪರ ಮಗನ ದುಡ್ಡಿನ ದುನಿಯಾ ಬಯಲಾಗಿದೆ.

ಶಾಸಕರ ಪುತ್ರ ಪ್ರಶಾಂತ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕೋಟಿಗಟ್ಟಲೇ ಹಣ ಪತ್ತೆಯಾಗಿದೆ.

ಪ್ರಶಾಂತ್ ಮನೆ ಹಾಗೂ ಕಚೇರಿಯಲ್ಲಿ ಒಟ್ಟು 7.62 ಕೋಟಿ ರೂ ನಗದು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸಂಜಯ್ ನಗರದ KMV ಮ್ಯಾನ್ಷನ್ ಅಪಾರ್ಟ್ಮೆಂಟ್ನಲ್ಲಿರುವ ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ನಿವಾಸದಲ್ಲಿ ಒಟ್ಟು 6 ಕೋಟಿ ರೂ ನಗದು ಹಣ ಪತ್ತೆಯಾಗಿದೆ.

ಒಟ್ಟು ಎಂಟು ಫ್ಲ್ಯಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ನು ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಕಚೇರಿಯಲ್ಲಿ 1.62 ಕೋಟಿ ರೂಪಾಯಿ ನಗದು ಜಪ್ತಿ

ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ, BWSSB ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್ ಮನೆ ಹಾಗೂ ಕಚೇರಿಯಲ್ಲಿ ಒಟ್ಟು 7.62 ಕೋಟಿ ಹಣ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು

ಬಿಜೆಪಿ ಶಾಸಕ ಪುತ್ರನ ಮನೆ-ಕಚೇರಿಯಲ್ಲಿ ಕೈ ಇಟ್ಟಲೆಲ್ಲ ಕಂತೆ ಕಂತೆ ಹಣ ಪತ್ತೆಯಾಗಿದ್ದು ಅಧಿಕಾರಿಗಳೇ ದಂಗಾಗಿದ್ದಾರೆ.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಲೋಕಾಯುಕ್ತರು ಬಂಧಿಸಿದ್ದು, ಇಂದು ಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
Published On - 8:55 am, Fri, 3 March 23




