‘ಹೆಂಗೆ ನಾವು..’ ಎಂದರೆ ತಕ್ಷಣ ನೆನಪಾಗೋದು ನಟಿ ರಚನಾ ಇಂದರ್. ಅಷ್ಟರಮಟ್ಟಿಗೆ ಅವರ ಈ ಡೈಲಾಗ್ ಫೇಮಸ್. ‘ಲವ್ ಮಾಕ್ಟೇಲ್’ ಸಿನಿಮಾದಿಂದ ಅವರು ಭಾರಿ ಜನಪ್ರಿಯತೆ ಪಡೆದುಕೊಂಡರು. ಮಾ.6ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಎಲ್ಲರೂ ರಚನಾಗೆ ಶುಭ ಕೋರುತ್ತಿದ್ದಾರೆ.
‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ರಚನಾ ಇಂದರ್ ಮಾಡಿದ ಪಾತ್ರ ತುಂಬ ಫೇಮಸ್ ಆಗಿತ್ತು. ಅದರಿಂದ ಅವರಿಗೆ ಹೊಸ ಹೊಸ ಅವಕಾಶಗಳು ಕೂಡ ಬರಲು ಆರಂಭಿಸಿದವು. ರಚನಾ ಅವರ ಅಭಿಮಾನಿ ಬಳಗ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿಯೂ ರಚನಾ ಇಂದರ್ ನಟಿಸಿದ್ದಾರೆ. ಆದರೆ ಮೊದಲ ಪಾರ್ಟ್ನಲ್ಲಿ ಇದ್ದಷ್ಟು ಸ್ಕ್ರೀನ್ ಸ್ಪೇಸ್ 2ನೇ ಪಾರ್ಟ್ನಲ್ಲಿ ಸಿಕ್ಕಿಲ್ಲ. ಕೆಲವೇ ಹೊತ್ತು ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.
ರಚನಾ ಇಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಸದ್ಯ ಅವರನ್ನು 78 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್ ಮೂಲಕ ರಚನಾ ಗಮನ ಸೆಳೆಯುತ್ತಾರೆ.