
ಸತೀಶ್ ನೀನಾಸಂ ನಟನೆಯ ‘ಲೂಸಿಯಾ’ ಸಿನಿಮಾ ತುಂಬ ಸ್ಪೆಷಲ್ ಪ್ರಯತ್ನ. ಆ ಚಿತ್ರ ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ. ಅಂದಿನ ನೆನಪುಗಳನ್ನು ಫೋಟೋ ಮೂಲಕ ಚಿತ್ರತಂಡ ಮೆಲುಕು ಹಾಕಿದೆ.

ಪವನ್ ಕುಮಾರ್ ಅವರು ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡಿದರು. ಈ ಚಿತ್ರದ ಮೂಲಕ ಅವರಿಗೆ ಬಹಳ ಜನಪ್ರಿಯತೆ ಸಿಕ್ಕಿತು. ಇಂದಿಗೂ ಪ್ರೇಕ್ಷಕರ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಲೂಸಿಯಾ’ ಸಿನಿಮಾ ಇದೆ.

ಶ್ರುತಿ ಹರಿಹರನ್ ಅವರು ‘ಲೂಸಿಯಾ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇದು ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ಬಳಿಕ ಅವರು ಸ್ಟಾರ್ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

‘ಲೂಸಿಯಾ’ ಸಿನಿಮಾವನ್ನು ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣ ಮಾಡಲಾಯಿತು. ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ ಹಾಡುಗಳು ಜನರಿಗೆ ಬಹಳ ಇಷ್ಟವಾದವು. ಜನ ಈಗಲೂ ಗುನುಗುತ್ತಿದ್ದಾರೆ.

ಪರಭಾಷೆ ಮಂದಿ ಕೂಡ ‘ಲೂಸಿಯಾ’ ಸಿನಿಮಾವನ್ನು ಹೊಗಳುತ್ತಾರೆ. 12 ವರ್ಷ ಕಳೆದಿದ್ದರೂ ಕೂಡ ಜನರು ಈ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಡಿಫರೆಂಟ್ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾಗೆ ಸ್ಥಾನವಿದೆ.