- Kannada News Photo gallery Mahashivratri 2023: Hubli Shree Siddaroodha Swamiji shivaratri special pooja and alankara
Mahashivratri 2023: ಶಿವರಾತ್ರಿ ನಿಮಿತ್ತ ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ವಿಶೇಷ ಅಲಂಕಾರದ ಫೋಟೋಗಳು ಇಲ್ಲಿವೆ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ. ಮಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
Updated on: Feb 18, 2023 | 3:32 PM

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ. ಮಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಸರ್ವಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಹಾಗೂ ಪವಾಡ ಪುರುಷರೆಂದೇ ಪ್ರಸಿದ್ಧರಾಗಿದ್ದ ಶ್ರೀ ಸಿದ್ಧಾರೂಢರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಜನಿಸಿ ದೇಶ ಸಂಚಾರ ಮಾಡುತ್ತ ಹುಬ್ಬಳ್ಳಿಯಲ್ಲಿ ಬಂದು ನೆಲೆಸಿದರು.

ಶಿವರಾತ್ರಿಯ ಸಮಯದಲ್ಲಿ ಶ್ರೀಮಠ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಎಡದಿಂದ ಮೊದಲಿಗೆ ಕಾಣಿಸುತ್ತಿರುವುದು ಕೈಲಾಸ ಮಂಟಪ, ಶ್ರೀ ಗುರುನಾಥಾರೂಢರ ಕತೃ ಗದ್ದುಗೆ, ಶ್ರೀ ಸಿದ್ಧಾರೂಢರ ಕತೃ ಗದ್ದುಗೆ.

ಜದ್ಗುರು ಶ್ರೀ ಸಿದ್ಧಾರೂಢರು

ಜದ್ಗುರು ಶ್ರೀ ಗುರುನಾಥಾರೂಢರು

ಕೈಲಾಸ ಮಂಟಪ

ಶ್ರೀ ಸಿದ್ಧಾರೂಢರ ಕತೃ ಗದ್ದುಗೆ

ಶ್ರೀ ಗುರುನಾಥಾರೂಢರ ಕತೃ ಗದ್ದುಗೆ

ಇಂದಿನ ಮಹಾಶಿವರಾತ್ರಿ ಪ್ರಯುಕ್ತ ಕೈಲಾಸ ಮಂಟಪದಲ್ಲಿರುವ ಉಬಯ ಶ್ರೀಗಳ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು. ನಾಳೆ (ಫೆ.18) ಬೆಳಗಿನ ಜಾವದ ಪೂಜೆ ಬಹಳ ವಿಶೇಷವಾಗಿರುತ್ತದೆ.

ನಾಳೆ (ಫೆ.18) ಸಾಯಂಕಾಲ 5 ಗಂಟೆಗೆ ರಥೋತ್ವ ಜರಗಲಿದ್ದು, ಭಕ್ತ ಸಾಗರವೇ ನೆರೆದಿರುತ್ತದೆ. ಎಲ್ಲ ಕಡೆ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಜಪ ಕೇಳುತ್ತಿರುತ್ತದೆ.



















