ನಟ ಮಹೇಶ್ ಬಾಬು ಅವರು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ತಂದೆ-ತಾಯಿ ನಿಧನದ ಬಳಿಕ ಕೊಂಚ ಮಂಕಾಗಿದ್ದ ಅವರು ಈಗ ಮತ್ತೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ.
ಮಹೇಶ್ ಬಾಬು ನಟನೆಯ 28ನೇ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಕಾರಣಾಂತರಗಳಿಂದ ಈ ಸಿನಿಮಾದ ಕೆಲಸಗಳು ವಿಳಂಬ ಆಗಿದ್ದವು. ಈಗ ಎಲ್ಲ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ.
‘SSMB 28’ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ತಂಡದ ಸದಸ್ಯರನ್ನು ಮಹೇಶ್ ಬಾಬು ಅವರು ಮುಂಬೈನಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಸಾತ್ ನೀಡಿದ್ದಾರೆ.
ಎಲ್ಲರ ಜೊತೆಗೆ ಸೇರಿ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಅವರು ಭೋಜನ ಸವಿದಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಅವು ವೈರಲ್ ಆಗಿವೆ.
ಮಹೇಶ್ ಬಾಬು ಮತ್ತು ನಮ್ರತಾ ಅವರು ಶೀಘ್ರದಲ್ಲೇ ರೆಸ್ಟೋರೆಂಟ್ ಬಿಸ್ನೆಸ್ ಆರಂಭಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ದಂಪತಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Published On - 3:46 pm, Wed, 7 December 22