
ಮಹೇಶ್ ಬಾಬು ಪುತ್ರಿ ಸಿತಾರಾಗೆ ಈಗಿನ್ನೂ 11 ವರ್ಷ ವಯಸ್ಸು, ಆದರೆ ನಾಯಕಿಯರನ್ನೇ ಮೀರಿಸುವ ಅಂದ ಈ ಹುಡುಗಿಯದ್ದು.

ನಟನೆ ಹಾಗೂ ನೃತ್ಯದಲ್ಲಿ ಆಸಕ್ತಿ ಹೊಂದಿರುವ ಸಿತಾರಾ, ತಂದೆಯ ಸರ್ಕಾರು ವಾರಿ ಪಾಟ ಸಿನಿಮಾದ ಹಾಡಿಗೆ ಕುಣಿದಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಇದೀಗ ಸಾಂಪ್ರದಾಯಿಕ ಉಡುಗೆಗಳಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಸಿತಾರಾ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಿತಾರಾರ ಸುಂದರ ಫೋಟೊಗಳು ನ್ಯೂಯಾರ್ಕ್ನ ಟೈಮ್ಸ್ ಸ್ಕೇರ್ನಲ್ಲಿ ಪ್ರದರ್ಶಿತಗೊಂಡಿವೆ.

ಸಿತಾರಾಗೆ ಸಿನಿಮಾಗಳ ಬಗ್ಗೆ ಬಹಳ ಆಸಕ್ತಿಯಿದ್ದು ಆಗಾಗ್ಗೆ ತಂದೆಯ ಜೊತೆ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಸಿತಾರಾ ಕೆಲವೇ ವರ್ಷಗಳಲ್ಲಿ ಸಿನಿಮಾ ನಾಯಕಿಯಾಗಿ ಎಂಟ್ರಿ ಕೊಡುವ ಎಲ್ಲ ಲಕ್ಷಣಗಳು ಇವೆ. ಬಂದರೆ ಮತ್ತೊಬ್ಬ ಕೀರ್ತಿ ಸುರೇಶ್ ಆಗುವುದು ಗ್ಯಾರೆಂಟಿ ಎನ್ನುತ್ತಿದ್ದಾರೆ ಸಿನಿಪ್ರೇಮಿಗಳು.

ಮಹೇಶ್ ಬಾಬುಗೆ ಪುತ್ರ ಸಹ ಇದ್ದಾನೆ. ಗೌತಮ್ ಹೆಸರಿನ ಮಹೇಶ್ ಬಾಬು ಮಗ ಈಗಾಗಲೇ ತಂದೆಯ ಜೊತೆಗೆ ನೇನೊಕ್ಕಿಡಿನೆ ಸಿನಿಮಾದಲ್ಲಿ ನಟಿಸಿದ್ದಾರೆ.