ಮಹೇಶ್ ಬಾಬು ಅವರು ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜೊತೆ ಟ್ರಿಪ್ ತೆರಳುತ್ತಾರೆ. ಇತ್ತೀಚೆಗೆ ಅವರು ಯುರೋಪ್ ಪ್ರವಾಸ ಮಾಡಿದ್ದಾರೆ. ಮಗಳು ಸಿತಾರಾ ಹಾಗೂ ಮಗ ಗೌತಮ್ ಕೂಡ ಇವರ ಜೊತೆ ಇದ್ದರು.
ಗೌತಮ್ ಹಾಗೂ ಸಿತಾರಾ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ.
ಮಹೇಶ್ ಬಾಬು, ಸಿತಾರಾ ಹಾಗೂ ಗೌತಮ್ ಹಿಮದಲ್ಲಿ ಸಮಯ ಕಳೆದಿದ್ದಾರೆ. ಈ ಫೋಟೋ ಕೂಡ ಸಖತ್ ಕ್ಯೂಟ್ ಆಗಿ ಮೂಡಿ ಬಂದಿದೆ. ಈ ಸುತ್ತಾಟದ ಫೋಟೋಗಳು ಫ್ಯಾನ್ಸ್ಗೆ ಇಷ್ಟ ಆಗಿದೆ.
ಮಹೇಶ್ ಬಾಬು ಪಕ್ಕಾ ಫ್ಯಾಮಿಲಿ ಮ್ಯಾನ್. ‘ಗುಂಟೂರು ಖಾರಂ’ ಬಳಿಕ ಅವರು ರಾಜಮೌಳಿ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬಾಡಿ ಕೂಡ ಬೆಳೆಸಿಕೊಳ್ಳುತ್ತಿದ್ದಾರೆ.
ರಾಜಮೌಳಿ ಸಿನಿಮಾಗೆ ಮಹೇಶ್ ಬಾಬು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ ಎಂದು ವರದಿ ಆಗಿದೆ.