
ಮಹೇಶ್ ಬಾಬು ಮಗ ಗೌತಮ್ ಅವರು ಇತ್ತೀಚೆಗೆ 18ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಬರ್ತ್ಡೇನ ಮಹೇಶ್ ಬಾಬು ಹಾಗೂ ಕುಟುಂಬದವರು ನ್ಯೂಯಾರ್ಕ್ನಲ್ಲಿ ಆಚರಿಸಿದ್ದಾರೆ. ಆ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಫೋಟೋಗೆ ಮೆಚ್ಚುಗೆ ಸಿಕ್ಕಿದೆ.

ಮಹೇಶ್ ಬಾಬು ಅವರಿಗೆ ಮಗನ ಮೇಲೆ ಸಾಕಷ್ಟು ಪ್ರೀತಿ ಇದೆ. ಗೌತಮ್ ಸದ್ಯ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಟನೆಗೆ ಕಾಲಿಡಲಿದ್ದಾರೆ. ಈಗ ಮಹೇಶ್ ಬಾಬು ಬಿಡುವು ಮಾಡಿಕೊಂಡು ಅಮೆರಿಕದಲ್ಲಿ ಸುತ್ತಾಟ ನಡೆಸಿದ್ದಾರೆ.

ಮಹೇಶ್ ಬಾಬು ಹಾಗೂ ಸಿತಾರಾ ನ್ಯೂಯಾರ್ಕ್ ರಸ್ತೆಗಳ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಅಲ್ಲಿ ಅವರನ್ನು ಗುರುತಿಸುವವರು ಕಡಿಮೆ. ಹೀಗಾಗಿ, ಯಾವುದೇ ಚಿಂತೆ ಇಲ್ಲದೆ ಅವರು ಹಾಯಾಗಿ ರಸ್ತೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಮಹೇಶ್ ಬಾಬು ಅವರ ಉದ್ದನೆಯ ಕೂದಲ ಗಮನ ಸೆಳೆದಿದೆ.

ಗೌತಮ್ಗೆ ಈಗ 18 ವರ್ಷ. ಅವರು ಹೀರೋ ಆಗೋಕೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರವೇ ಅವರು ಚಿತ್ರರಂಗಕ್ಕೆ ಕಾಲಿಟ್ಟರೂ ಅಚ್ಚರಿ ಏನಿಲ್ಲ. ಅವರು ಶಿಕ್ಷಣ ಮುಗಿಸಿ ಭಾರತಕ್ಕೆ ಮರಳುವ ಸಾಧ್ಯತೆ ಇದೆ.

ಸಿತಾರಾ ವಿಚಾರಕ್ಕೆ ಬರೋದಾದರೆ ಅವರು ಈಗಾಗಲೇ ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಳ್ಳುತ್ತಿದ್ದಾರೆ. ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನ್ ಹಾಡಿನಲ್ಲಿ ಕಾಣಿಸಿಕೊಂಡು ಅವರು ಮಿಂಚಿದ್ದರು. ಆಭರಣದ ಜಾಹೀರಾತುಗಳಲ್ಲಿ ಮಾಡೆಲ್ ಆಗಿಯೂ ಮಿಂಚುತ್ತಿದ್ದಾರೆ.