- Kannada News Photo gallery Manika Batra First Indian Female To Win Bronze madel At Asian Table Tennis Event
Asian Cup: ಏಷ್ಯನ್ ಕಪ್ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನಿಕಾ ಬಾತ್ರಾ..!
Asian Cup: ಏಷ್ಯನ್ ಕಪ್‌ನ 39 ವರ್ಷಗಳ ಇತಿಹಾಸದಲ್ಲಿ ಪದಕ ಗೆದ್ದ ಮೊದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನಿಕಾ ಪಾತ್ರರಾಗಿದ್ದಾರೆ.
Updated on: Nov 19, 2022 | 6:03 PM

ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಏಷ್ಯನ್ ಕಪ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಸೋತ ನಂತರ ಅವರು ಕಂಚಿನ ಪದಕಕ್ಕಾಗಿ ಜಪಾನ್‌ನ ಹೀನಾ ಹಯಾತ್ ಅವರನ್ನು ಎದುರಿಸಿದ್ದರು.

ಮನಿಕಾ ಬಾತ್ರಾ ಪದಕದ ಪಂದ್ಯದಲ್ಲಿ ಹಿನಾ ಹಯಾತಾ ಅವರನ್ನು 11-6,6-11,11-7,12-10,4-11, 11-2 ಸೆಟ್ಗಳಿಂದ ಸೋಲಿನ ಪಂದ್ಯವನ್ನು ಗೆದ್ದು ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ನಿರಾಸೆಯ ನಂತರ ಮನಿಕಾ ಪಡೆದ ದೊಡ್ಡ ಗೆಲುವು ಇದಾಗಿದೆ.

ಶ್ರೇಯಾಂಕ ರಹಿತ ಮನಿಕಾ ಈ ಕಾಂಟಿನೆಂಟಲ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ವಿಶ್ವದ ಐದನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿಯ ವಿರುದ್ಧ 8-11 11-7 7-11 6-11 11-8 7-11 (2-4) ಸೋಲನುಭವಿಸಿ ಚಿನ್ನದ ಪದಕದ ರೇಸ್ನಿಂದ ಹೊರಬಿದ್ದಿದ್ದರು.

ಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಮನಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ತನ್ನ ಉತ್ತಮ ಶ್ರೇಯಾಂಕದ ಚೈನೀಸ್ ತೈಪೆಯ ಚೆನ್ ಸು ಯು ಅವರನ್ನು 4-3 ಅಂತರದಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದರು.

ಏಷ್ಯನ್ ಕಪ್‌ನ 39 ವರ್ಷಗಳ ಇತಿಹಾಸದಲ್ಲಿ ಪದಕ ಗೆದ್ದ ಮೊದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನಿಕಾ ಪಾತ್ರರಾಗಿದ್ದಾರೆ. ಈ ಹಿಂದೆ 2015ರಲ್ಲಿ ಅಚಂತ ಶರತ್ ಕಮಲ್ ಮತ್ತು 2019ರಲ್ಲಿ ಜಿ ಸತ್ಯನ್ ಆರನೇ ಸ್ಥಾನ ಪಡೆದಿದ್ದರು.




