
ನಟಿ ಮಾನ್ವಿತಾ ಕಾಮತ್ ಅವರ ವಿವಾಹ ಇಂದು (ಮೇ 1) ನಡೆದಿದೆ. ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನಡೆದಿದೆ.

ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಮಾನ್ವಿತಾ ವಿವಾಹ ಆಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ನಡೆದಿದೆ.

ಮಾನ್ವಿತಾ ಅವರ ವಿವಾಹದಲ್ಲಿ ಆಪ್ತರು ಹಾಗೂ ಗೆಳೆಯರು ಮಾತ್ರ ಇದ್ದರು. ಮಾನ್ವಿತಾ ಅವರು ಸೀರೆ ಉಟ್ಟು ಸಂಪ್ರದಾಯವಾಗಿ ಕಾಣಿಸಿಕೊಂಡರು.

ಏಪ್ರಿಲ್ 29ರಂದು ಮಾನ್ವಿತಾ ಅವರ ಹಳದಿ ಶಾಸ್ತ್ರ ನಡೆದಿದೆ. ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ನಡೆದಿದೆ.

ಮಾನ್ವಿತಾ ಅವರದ್ದು ಲವ್ ಮ್ಯಾರೇಜ್ ಎನ್ನುವ ಗಾಸಿಪ್ ಇದೆ. ಆದರೆ, ಇದು ಸುಳ್ಳು ಎಂದಿದ್ದಾರೆ. ಅವರದ್ದು ಅರೇಂಜ್ ಮ್ಯಾರೇಜ್.
Published On - 12:50 pm, Wed, 1 May 24