
ಕಾವೇರಿ ಹೋರಾಟ ಬೆಂಬಲಿಸಿ ಸೆಪ್ಟೆಂಬರ್ 29ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಚಿತ್ರರಂಗ ಬೆಂಬಲ ಸೂಚಿಸಿದೆ.

ಫಿಲಂ ಚೇಂಬರ್ ನೂತನ ಅಧ್ಯಕ್ಷ ಸುರೇಶ್ ಅವರು ಹಲವು ನಟರನ್ನು ಭೇಟಿಯಾಗಿ ಪ್ರತಿಭಟನೆಗೆ ಆಹ್ವಾನಿಸಿದ್ದಾರೆ.

ನಟ ಕೋಮಲ್ ಅನ್ನು ಸಹ ಕಾವೇರಿ ಹೋರಾಟದ ಭಾಗವಾಗುವಂತೆ ಕೇಳಿದ್ದಾರೆ.

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ನಟ ಧ್ರುವ ಸರ್ಜಾ ಅವರನ್ನು ಭೇಟಿಯಾಗಿ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಕೇಳಿದ್ದಾರೆ.

ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಹೋರಾಟದ ನೇತೃತ್ವ ವಹಿಸುವಂತೆ ಮನವೊಲಿಸಿದ್ದಾರೆ.

ಫಿಲಂ ಚೇಂಬರ್ ಪಕ್ಕದ ಹಾಲ್ನ ಬಳಿ ಪ್ರತಿಭಟನೆ ನಡೆಯಲಿದ್ದು, ಬಳಿಕ ಪ್ರತಿಭಟನಾ ಮೆರವಣಿಗೆ ಸಹ ಇರಲಿದೆ.

ಕಾವೇರಿ ಹೋರಾಟಕ್ಕೆ ಚಿತ್ರರಂಗವೂ ಧುಮುಕಿದ್ದು, ನಾಳೆ (ಸೆಪ್ಟೆಂಬರ್ 29) ರಂದು ಪ್ರತಿಭಟನೆ ನಡೆಸಲಿದೆ.