Kannada News » Photo gallery » Maruti Suzuki India Tata Motors Mercedes Benz, Audi Renault Kia India and others announced Car price hike from January 2023 details here Latest business news in Kannada
Car Prices Hike: ಜನವರಿಯಿಂದ ದುಬಾರಿಯಾಗಲಿವೆ ಈ ಕಾರುಗಳು
TV9kannada Web Team | Edited By: Ganapathi Sharma
Updated on: Dec 08, 2022 | 5:09 PM
ಜನವರಿಯಿಂದ ಕಾರುಗಳ ದರದಲ್ಲಿ ಹೆಚ್ಚಳ ಮಾಡುವುದಾಗಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಬುಧವಾರ ಘೋಷಿಸಿದ್ದವು. ಇದರ ಬೆನ್ನಲ್ಲೇ ಮರ್ಸಿಡಿಸ್ ಬೆಂಜ್, ಕಿಯಾ, ಆಡಿ ಸೇರಿದಂತೆ ಮತ್ತೆ ಕೆಲವು ಕಂಪನಿಗಳೂ ದರ ಹೆಚ್ಚಳದ ಸುಳಿವು ನೀಡಿವೆ. ವಿವರ ಇಲ್ಲಿದೆ.
Dec 08, 2022 | 5:09 PM
Maruti Suzuki India Tata Motors Mercedes Benz, Audi Renault Kia India and others announced Car price hike from January 2023 details here Latest business news in Kannada
1 / 6
Maruti Suzuki India Tata Motors Mercedes Benz, Audi Renault Kia India and others announced Car price hike from January 2023 details here Latest business news in Kannada
2 / 6
ಸರಕುಗಳ ಬೆಲೆ ಏರಿಕೆ, ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತ, ಹಣದುಬ್ಬರ ಮತ್ತು ಇತರ ಕಾರಣಗಳಿಂದಾಗಿ ವೆಚ್ಚಗಳಲ್ಲಿನ ನಿರಂತರ ಹೆಚ್ಚಳವಾಗಿದೆ. ಇದನ್ನು ಭಾಗಶಃ ಸರಿದೂಗಿಸುವುದಕ್ಕಾಗಿ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ರೆನಾಲ್ಟ್ ಹೇಳಿದೆ.
3 / 6
ಜನವರಿಯಿಂದ ಕಾರುಗಳ ಬೆಲೆಯಲ್ಲಿ ಶೇಕಡಾ 1.7ರಷ್ಟು ಹೆಚ್ಚಳ ಮಾಡುವುದಾಗಿ ಆಡಿ ಇಂಡಿಯಾ ತಿಳಿಸಿದೆ.
4 / 6
ಕಿಯಾ ಇಂಡಿಯಾ ಕೂಡ ಮುಂದಿನ ತಿಂಗಳಿನಿಂದ ಕಾರಿನ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಆದರೆ ಎಷ್ಟು ಹೆಚ್ಚಳ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ವಿವಿಧ ಮಾದರಿಗಳ ಕಾರುಗಳ ಮೇಲೆ ಸುಮಾರು 50,000 ರೂ. ವರೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
5 / 6
ಮರ್ಸಿಡಿಸ್ ಬೆಂಜ್ ಜನವರಿಯಿಂದ ಕಾರುಗಳ ಬೆಲೆಯಲ್ಲಿ ಶೇಕಡಾ 5ರಷ್ಟು ಹೆಚ್ಚಳ ಮಾಡುವುದಾಗಿ ತಿಳಿಸಿದೆ. ವೆಚ್ಚ ಹೆಚ್ಚಾಗಿರುವುದರಿಂದ ಇದರಲ್ಲಿ ತುಸು ಪಾಲನ್ನು ಗ್ರಾಹಕರಿಗೆ ವರ್ಗಾಯಿಸದೆ ಬೇರೆ ಆಯ್ಕೆಗಳಿಲ್ಲ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ಸಿಇಒ ಮಾರ್ಟಿನ್ ಶ್ವೆಂಕ್ ತಿಳಿಸಿದ್ದಾರೆ.