ಸೆಲೆಬ್ರಿಟಿಗಳು ಜಿಮ್ನಲ್ಲಿ ಸದಾ ವರ್ಕೌಟ್ ಮಾಡುತ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳೋಕೆ ಹೆಚ್ಚು ಆದ್ಯತೆ ನೀಡುತ್ತಾರೆ. ನಟಿ ಮೇಘಾ ಶೆಟ್ಟಿ ಕೂಡ ಇದಕ್ಕೆ ಹೊರತಾಗಿಲ್ಲ.
ಮೇಘಾ ಶೆಟ್ಟಿ ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಮೇಘಾ ಶೆಟ್ಟಿ ಆಗಾಗ ವರ್ಕೌಟ್ ಫೋಟೋ ಹಾಗೂ ಯೋಗಾಸನ ಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈಗ ಹಂಚಿಕೊಂಡಿರುವ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಮೇಘಾ ಶೆಟ್ಟಿ ಅವರು ಮೇಕಪ್ ಇಲ್ಲದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಮುಖದಲ್ಲಿ ಬೆವರು ಹರಿಯುತ್ತಿದೆ.
ಮೇಘಾ ಶೆಟ್ಟಿ ಅವರ ನಟನೆಯ ‘ಜೊತೆ ಜೊತೆಯಲಿ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿತ್ತು. ಈ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ.
ಸದ್ಯ ಮೇಘಾ ಶೆಟ್ಟಿ ಅವರು ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.
ಮೇಘಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಕಿರುತೆರೆಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಅವರು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಮೇಘಾ ಶೆಟ್ಟಿ ಹೊಸ ಫೋಟೋಸ್