
ನಟಿ ಮೇಘನಾ ರಾಜ್ ಅವರು ಖುಷಿಯಿಂದ ಕ್ರಿಸ್ಮಸ್ ಹಬ್ಬ ಆಚರಿಸಿದ್ದಾರೆ. ಅವರು ಕ್ರಿಸ್ಮಸ್ ಗಿಡವನ್ನು ಮಾಡಿ ಅದನ್ನು ಬೆಳಕಿನಿಂದ ಅಲಂಕರಿಸಿದ್ದಾರೆ. ಇಷ್ಟೇ ಅಲ್ಲ, ಎಲ್ಲರನ್ನೂ ಕರೆದು ಅವರು ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಮೇಘನಾ ರಾಜ್ ಅವರು ಪ್ರತಿ ವರ್ಷವೂ ಅದ್ದೂರಿಯಾಗಿ ಕ್ರಿಸ್ಮಸ್ ಆಯೋಜನೆ ಮಾಡುತ್ತಾರೆ. ಈ ವರ್ಷವೂ ಅದು ಮುಂದುವರಿದಿದೆ. ಮನೆಯಲ್ಲೇ ಪಾರ್ಟಿಯನ್ನು ಆಯೋಜನೆ ಮಾಡಿದ್ದರು ಮೇಘನಾ. ಈ ಪಾರ್ಟಿಗೆ ಚಿತ್ರರಂಗದ ಸೆಲೆಬ್ರಿಟಿಗಳು ಬಂದಿದ್ದರು.

ಮೇಘನಾ ರಾಜ್ ತಾಯಿ ಪ್ರಮಿಳಾ ಜೋಶಾಯ್, ಮಾಳವಿಕಾ, ರಕ್ಷಿತಾ ಪ್ರೇಮ್, ಶ್ರುತಿ ಹಾಗೂ ಅವರ ಮಗಳು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಎಲ್ಲರೂ ಒಟ್ಟಾಗಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ಎಲ್ಲರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಹೀಗಾಗಿ, ಒಟ್ಟಿಗೆ ಸೇರಲು ಸಮಯ ಸಿಕ್ಕಿರೋದಿಲ್ಲ. ಈಗ ಸಮಯ ಮಾಡಿಕೊಂಡು ಎಲ್ಲರನ್ನೂ ಒಂದು ಕಡೆ ಸೇರಿಸೋ ಕೆಲಸವನ್ನು ಮೇಘನಾ ರಾಜ್ ಅವರು ಮಾಡಿರುವುದು ಖುಷಿಯ ವಿಷಯ.

ಈ ಸಮಯವನ್ನು ಎಲ್ಲರೂ ಎಂಜಾಯ್ ಮಾಡಿದ್ದಾರೆ. ಚಿತ್ರರಂಗದ ಆಗು ಹೋಗುಗಳ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು ದಿನ ಹಾಯಾಗಿ ಸಮಯ ಕಳೆದಿದ್ದಾರೆ.