
ನಟಿ ಮೇಘನಾ ರಾಜ್ ಅವರು ಬೇಸಿಗೆ ರಜವನ್ನು ಗೋವಾದಲ್ಲಿ ಕಳೆಯುತ್ತಿದ್ದಾರೆ. ಮಗ ರಾಯನ್ ಹಾಗೂ ತಾಯಿ ಜೊತೆ ಅವರು ಗೋವಾ ಬೀದಿ ಹಾಗೂ ಬೀಚ್ಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

ಮೇಘನಾ ರಾಜ್ ಅವರು ಮಗನ ಜೊತೆ ಬೀಚ್ನಲ್ಲಿ ಆಟ ಆಡಿದ್ದಾರೆ. ಖುಷಿಯಿಂದ ಅವರು ಸಮಯ ಕಳೆದಿದ್ದಾರೆ. ಮೇಘನಾ ಅಭಿಮಾನಿಗಳಿಗೆ ಈ ಫೋಟೋ ಸಾಕಷ್ಟು ಇಷ್ಟ ಆಗಿದೆ. ಮೇಘನಾ ಖುಷಿಯಾಗಿರೋದು ನೋಡಿ ಅಭಿಮಾನಿಗಳಿಗೆ ನಿರಾಳ ಆಗಿದೆ.

ಮೇಘನಾ ರಾಜ್ ಅವರಿಗೆ ಸಮುದ್ರ ತೀರ ಎಂದರೆ ಸಖತ್ ಇಷ್ಟ. ಈ ಕಾರಣದಿಂದಲೇ ಅವರು ಗೋವಾಗೆ ತೆರಳಿದ್ದಾರೆ. ಗೋವಾದಲ್ಲಿ ಅವರು ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಅವರ ಕುಟುಂಬದ ಇತರ ಸದಸ್ಯರು ಕೂಡ ಅವರ ಜೊತೆ ಇದ್ದರು.

ಚಿರಂಜೀವಿ ಸರ್ಜಾ ನಿಧನ ಹೊಂದುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಆ ಬಳಿಕ ಅವರಿಗೆ ಮಗ ರಾಯನ್ ಜನಿಸಿದ. ಮಗನನ್ನು ತುಂಬಾನೇ ಪ್ರೀತಿಯಿಂದ ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ಮಗನ ಖುಷಿಗಾಗಿ ಏನು ಮಾಡಲು ಬೇಕಿದ್ದರೂ ಅವರು ರೆಡಿ ಇದ್ದಾರೆ.

ಮೇಘನಾ ರಾಜ್ ಗೋವಾ ಟ್ರಿಪ್ಗೆ ಅವರ ತಾಯಿ ಪ್ರಮಿಳಾ ಜೋಷಾಯ್ ಕೂಡ ಇದ್ದರು. ಅವರು ಮೇಘನಾ ಅವರ ಟ್ರಿಪ್ನಲ್ಲಿ ಸಾಥ್ ನೀಡಿದ್ದಾರೆ. ಬೀಚ್ ಹಾಗೂ ಗೋವಾ ಬೀದಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.