ಮೆಟ್ ಗಾಲಾ ವೇದಿಕೆ ಮೇಲೆ ಮಿಂಚಿದ ಕರಣ್​ ಜೋಹರ್-ಇಶಾ ಅಂಬಾನಿ

Updated on: May 05, 2026 | 10:14 AM

Met Gala: ಮೆಟ್ ಗಾಲಾ ಎಂದರೆ ಫ್ಯಾಷನ್ ಲೋಕದ ಅತ್ಯಂತ ದೊಡ್ಡ ಮತ್ತು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದು. ಇದನ್ನು ಸರಳವಾಗಿ ‘ಫ್ಯಾಷನ್ ಲೋಕದ ಆಸ್ಕರ್’ ಎಂದೂ ಕರೆಯಲಾಗುತ್ತದೆ. ಈ ಫ್ಯಾಷನ್ ಲೋಕದ ಆಸ್ಕರ್​ನಲ್ಲಿ ಭಾರತದ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಇದು ಇನ್ನೂ ಆರಂಭ ಮಾತ್ರ.

1 / 6
ಫ್ಯಾಷನ್ ಲೋಕದ ಅತಿ ದೊಡ್ಡ ಹಬ್ಬ ಮೆಟ್ ಗಾಲಾ ಆರಂಭ ಆಗಿದೆ. ನ್ಯೂಯಾರ್ಕ್ ನಗರದ 'ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್’ಗಾಗಿ ನಡೆಯುವ ಒಂದು ನಿಧಿ ಸಂಗ್ರಹಣೆ ಕಾರ್ಯಕ್ರಮ ಇದಾಗಿದೆ.

ಫ್ಯಾಷನ್ ಲೋಕದ ಅತಿ ದೊಡ್ಡ ಹಬ್ಬ ಮೆಟ್ ಗಾಲಾ ಆರಂಭ ಆಗಿದೆ. ನ್ಯೂಯಾರ್ಕ್ ನಗರದ 'ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್’ಗಾಗಿ ನಡೆಯುವ ಒಂದು ನಿಧಿ ಸಂಗ್ರಹಣೆ ಕಾರ್ಯಕ್ರಮ ಇದಾಗಿದೆ.

2 / 6

ವಿಶ್ವದ ಖ್ಯಾತ ಸಿನಿ ತಾರೆಯರು, ಸಂಗೀತಗಾರರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಇಲ್ಲಿ ಭಾಗವಹಿಸುತ್ತಾರೆ. ಈ ಬಾರಿ ನಿರ್ಮಾಪಕರ ಕರಣ್ ಜೋಹರ್, ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

3 / 6

ಅತಿಥಿಗಳು ವಿಭಿನ್ನ ಹಾಗೂ ಅತ್ಯಂತ ವಿಶಿಷ್ಟವಾದ ವಿನ್ಯಾಸದ ಉಡುಪುಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾರೆ. ಅದೇ ರೀತಿ ಕರಣ್ ಜೋಹರ್ ಅವರು ಭಿನ್ನ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದೆ. ಭಾರತದ ಸಂಸ್ಕೃತಿಯನ್ನು ಇದು ಪ್ರತಿನಿಧಿಸುವ ರೀತಿಯಲ್ಲಿ ಇದೆ.

4 / 6

‘ನಾವೀನ್ಯತೆಯ ಸೌಂದರ್ಯ: ಫ್ಯಾಷನ್ ತಂತ್ರಜ್ಞಾನದ ಒಂದು ಶತಮಾನ’: ಇದು 2026ರ ಥೀಮ್. ಕಳೆದ 100 ವರ್ಷಗಳಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ತಂತ್ರಜ್ಞಾನ (ಉದಾಹರಣೆಗೆ 3D ಪ್ರಿಂಟಿಂಗ್, ಎಲ್ಇಡಿ ಬಟ್ಟೆಗಳು ಇತ್ಯಾದಿ) ಹೇಗೆ ಬದಲಾವಣೆ ತಂದಿದೆ ಎಂಬುದನ್ನು ಇದು ಬಿಂಬಿಸುತ್ತದೆ.

5 / 6

ಇಶಾ ಅಂಬಾನಿ, ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರ ಹಾಗೂ ಕರಣ್ ಜೋಹರ್ ಅವರ ಉಡುಗೆಯ ಥೀಮ್​​ಗಳು ಇದೇ ಮಾದರಿಯಲ್ಲಿ ಇದ್ದವು. ಮುಂದಿನ ದಿನಗಳಲ್ಲಿ ರೆಡ್ ಕಾರ್ಪೆಟ್ ಮೇಲೆ ಬಣ್ಣ ಬದಲಿಸುವ ಬಟ್ಟೆಗಳನ್ನು ಕೂಡ ನೋಡಬಹುದಾಗಿದೆ.

6 / 6

ಮೇ ತಿಂಗಳ ಮೊದಲ ಸೋಮವಾರದಂದು ಮೆಟ್ ಗಾಲಾ ಕಾರ್ಯಕ್ರಮ ಆರಂಭ ಆಗಿದೆ. 'ವೋಗ್' ನಿಯತಕಾಲಿಕೆಯ ಸಂಪಾದಕಿ ಅನ್ನಾ ವಿಂಟರ್ ಇದರ ನೇತೃತ್ವ ವಹಿಸುತ್ತಾರೆ. 2026ರ ಮೆಟ್ ಗಾಲಾ ಕೇವಲ ಫ್ಯಾಷನ್ ಮಾತ್ರವಲ್ಲದೆ, ಕಲೆ ಮತ್ತು ತಂತ್ರಜ್ಞಾನದ ಸಂಗಮವಾಗಿದೆ.

Published On - 10:13 am, Tue, 5 May 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us