- Kannada News Photo gallery Minister Ramalinga Reddy inspects New KSRTC Bus after renovation of old buses
ಹಳೆ KSRTC ಬಸ್‌ಗಳಿಗೆ ಹೊಸ ಕಳೆ: ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಬಸ್, ವಿಶೇಷತೆ ಏನು ಗೊತ್ತಾ?
ಶಕ್ತಿ ಯೋಜನೆ ಬಳಿಕ ಸಾರಿಗೆ ಇಲಾಖೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಹೊಸ ವಿನ್ಯಾಸದ ಮೂಲಕ ವಿನೂತನ ಮಾದರಿಯ KSRTC ಬಸ್ ರಸ್ತೆಗಿಳಿಯಲಿವೆ. ರಾಜಹಂಸ ಮಾದರಿಯ ವ್ಯವಸ್ಥೆ ಇನ್ಮುಂದೆ ಸಾಮಾನ್ಯ ಸಾರಿಗೆ ಬಸ್ನಲ್ಲೂ ಸಿಗಲಿದ್ದು, ಈ ವಿನೂತನ ಮಾದರಿಯ ಬಸ್ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದರು. ಹಾಗಾದ್ರೆ, ಬಸ್ ಹೇಗಿದೆ? ಇವುಗಳ ವಿಶೇಷತೆ ಏನು? ಯಾವ ಮಾರ್ಗದಲ್ಲಿ ಸಂಚರಿಸಲಿವೆ? ಎನ್ನುವ ವಿವರವನ್ನು ಫೋಟೋಗಳಲ್ಲಿ ನೊಡಿ.
Updated on:Aug 21, 2023 | 2:38 PM

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಬಳಿಕ ಇದೀಗ ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್

ಹಳೆ ಬಸ್ ಗೆ ಕೆಎಸ್ಆರ್ಟಿಸಿ ಹೊಸ ವಿನ್ಯಾಸ ನೀಡಿದ್ದು, ಶೀಘ್ರದಲ್ಲೇ ವಿನೂತನ ಮಾದರಿಯ KSRTC ಬಸ್ ರಸ್ತೆಗೆ ಇಳಿಯಲಿವೆ.

ಹೊಸ ವಿನ್ಯಾಸದ ಮೂಲಕ ಓಡಾಡಲಿವೆ ವಿನೂತನ ಮಾದರಿಯ KSRTC ಬಸ್ಗಳನ್ನು ಸಾರಿಗೆ ಸಚಿವ ಪರಿಶೀಲನೆ ಮಾಡಿದರು.

ಕೆಂಪು ಬಸ್ಸಿನಲ್ಲಿ ಇನ್ಮುಂದೆ ರಾಜಹಂಸ ಬಸ್ ಮಾದರಿಯ ಸೇವೆ ಪ್ರಯಾಣಿಕರಿಗೆ ಸಿಗಲಿದೆ

ಕೆಎಸ್ಆರ್ಟಿಸಿ ಹೊಸ ಮಾದರಿ point to point ಮತ್ತು Express ಸೇವೆ ನೀಡಲಿರೋ ವಿನೂತನ ಬಸ್

ಒಂದೂವರೆ ತಿಂಗಳಲ್ಲಿ ವಿನೂತನ ಮಾದರಿಯ 300 ಬಸ್ ರಸ್ತೆಗೆ ಇಳಿಯಲಿದ್ದು, ಈ ವಿನೂತನ ಬಸ್ ನಲ್ಲಿ ಎಂಡ್ ಟು ಎಂಡ್ ಮಾತ್ರ ನಿಲುಗಡೆಯಾಗಲಿವೆ.

ಸದ್ಯ 10 ಲಕ್ಷ ಓಡಿರೋ ಬಸ್ ಗೆ ಹೊಸ ವಿನ್ಯಾಸ ನೀಡಿದ ಕೆಎಸ್ಆರ್ಟಿಸಿ, ಹೊಸ ಮಾದರಿಯ ಬಸ್ ಬೆಂಗಳೂರು ಟು ಧರ್ಮಸ್ಥಳ ನಡುವೆ ಸಂಚರಿಸಲಿವೆ.

ವಿನೂತನ ಮಾದರಿ ಬಸ್ ಗಳಲ್ಲಿಯೂ ಲಿಮಿಟೆಡ್ ನಿಲುಗಡೆ ಇದ್ದು, ಬೆಂಗಳೂರು ಬಿಟ್ಟರೆ ಧರ್ಮಸ್ಥಳದಲ್ಲಿ ಮಾತ್ರ ಸ್ಟಾಪ್ ನೀಡಲಿವೆ.
Published On - 2:37 pm, Mon, 21 August 23



