ಲಕ್ಷದ್ವೀಪದಲ್ಲಿ ಮೋದಿ: ಅದ್ಭುತ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇಲ್ಲಿದೆ ಫೋಟೋ

Updated on: Jan 04, 2024 | 4:29 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ತಾವು ಕಳೆದ ಸುಂದರ ಕ್ಷಣದ ಬಗ್ಗೆ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷದ್ವೀಪ ಸ್ವಾಗತಿಸಿದಕ್ಕೆ ಅಲ್ಲಿನ ಜನರಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಜನರು ಸನ್ಮಾನ ಹಾಗೂ ಉಡೊಗೆರೆಗಳನ್ನು ನೀಡಿ ಗೌವರಸಿದರು.

1 / 10
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ತಾವು ಕಳೆದ ಸುಂದರ ಕ್ಷಣದ ಬಗ್ಗೆ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದರು. ತಾವು ಕಳೆದ ಸುಂದರ ಕ್ಷಣದ ಬಗ್ಗೆ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ.

2 / 10

ದ್ವೀಪಗಳ ರಮಣೀಯ ಸೌಂದರ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸಾಹಸಿ ಪ್ರವಾಸಗಳನ್ನು ಮಾಡುವವರು ಲಕ್ಷದ್ವೀಪವನ್ನು ತಮ್ಮ ಆಯ್ಕೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳಿದರು.

3 / 10

ಲಕ್ಷದ್ವೀಪ ಸ್ವಾಗತಿಸಿದಕ್ಕೆ ಅಲ್ಲಿನ ಜನರಿಗೆ ಪ್ರಧಾನಿ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಜನರು ಸನ್ಮಾನ ಹಾಗೂ ಉಡೂಗೆರೆಗಳನ್ನು ನೀಡಿ ಗೌವರಸಿದರು.

4 / 10

ತಂತ್ರಜ್ಞಾನ, ಇಂಧನ, ಜಲಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 1,150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು.

5 / 10

ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಇಲ್ಲಿನ ಜನರ ಆಚರಣೆ, ಬದುಕನ್ನು ಕಂಡು ವಿಸ್ಮಯಗೊಂಡಿದ್ದೇನೆ. ಇಲ್ಲಿ ನನಗೆ ಒಂದು ಅದ್ಭುತ ಅವಕಾಶ ಸಿಕ್ಕಿದೆ. ಒಂದು ಅದ್ಭುತ ಕ್ಷಣವನ್ನು ನಾನು ಇಲ್ಲಿ ಕಳೆದಿದ್ದೇನೆ ಎಂದು ಮೋದಿ ಹೇಳಿದ್ದಾರೆ.

6 / 10

140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂದು ಪ್ರತಿಬಿಂಬಿಸಲು ಇದು ನನಗೆ ಅವಕಾಶವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

7 / 10

ಪ್ರಧಾನಿ ಮೋದಿ ಅವರು ಅಲ್ಲಿ ಸ್ನಾರ್ಕ್ಲಿಂಗ್ ಕೂಡ ಮಾಡಿದ್ದಾರೆ. ಇಂದು ಒಂದು ಅದ್ಭುತ ಸಾಹಸ ಹಾಗೂ ಒಂದು ಒಳ್ಳೆಯ ಅನುಭವ ಎಂದು ಹೇಳಿದ್ದಾರೆ. ಇದು ಎಂತಹ ರೋಮಾಂಚನಕಾರಿ ಅನುಭವ, ಖಂಡಿತ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು ಎಂದು ಹೇಳಿದ್ದಾರೆ.

8 / 10

ಕಡಲತೀರದಲ್ಲಿ ಕುಳಿತಿರುವ ಛಾಯಾಚಿತ್ರವನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ. ಪ್ರಾಚೀನ ಕಡಲತೀರಗಳ ಉದ್ದಕ್ಕೂ ಆ ಮುಂಜಾನೆ ನಡಿಗೆಗಳು ಶುದ್ಧ ಆನಂದದ ಕ್ಷಣಗಳಾಗಿವೆ. ರಮಣೀಯ ಸೌಂದರ್ಯದ ಜೊತೆಗೆ, ಲಕ್ಷದ್ವೀಪದ ಶಾಂತಿಯು ಸಹ ಮೋಡಿ ಮಾಡುತ್ತದೆ ಎಂದು ಹೇಳಿದ್ದಾರೆ.

9 / 10

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆಗಿನ ಸಂವಾದದ ವೇಳೆ ತೆಗೆದ ಫೋಟೋಗಳನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ.

10 / 10

ಲಕ್ಷದ್ವೀಪವು ಕೇವಲ ದ್ವೀಪಗಳ ಸಮೂಹವಲ್ಲ; ಇದು ಸಂಪ್ರದಾಯಗಳ ಕಾಲಾತೀತ ಪರಂಪರೆಯಾಗಿದೆ ಮತ್ತು ಅದರ ಜನರ ಆತ್ಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

Published On - 4:27 pm, Thu, 4 January 24

Loading...
Unable to load recommendations.
Follow Us