
ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಅವರು 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಭೇಟಿಯಾದರು. ಅವರಿಬ್ಬರ ಸಿಹಿ ಅಪ್ಪುಗೆಯ ಕ್ಷಣದ ಫೋಟೋ ವೈರಲ್ ಆಗಿದೆ.

ಪ್ರಮುಖ ಪ್ರಶಸ್ತಿಗಳನ್ನು ಪಡೆದ ವಿಕ್ರಾಂತ್ ಮಾಸಿ, ರಾಣಿ ಮುಖರ್ಜಿ, ಶಾರುಖ್ ಖಾನ್ ಮತ್ತು ಮೋಹನ್ಲಾಲ್ ಅವರು ಒಂದೇ ಸಾಲಿನಲ್ಲಿ ಕುಳಿತಿದ್ದರು. ವಿಕ್ರಾಂತ್ ಮಾಸಿ ಮತ್ತು ಮೋಹನ್ಲಾಲ್ ಅವರು ಕೈ ಕುಲುಕಿ ಮಾತನಾಡಿದರು.

ನಟ ಶಾರುಖ್ ಖಾನ್ ಅವರಿಗೆ ಸಿಕ್ಕ ಮೊದಲ ರಾಷ್ಟ್ರ ಪ್ರಶಸ್ತಿ ಇದು. ‘ಜವಾನ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದುಕೊಂಡರು. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಚಿತ್ರರಂಗಕ್ಕೆ ಮೋಹನ್ಲಾಲ್ ಅವರು ನೀಡಿರುವ ಕೊಡುಗೆ ಅಪಾರ. ಅವರ ಸಾಧನೆಯನ್ನು ಗುರುತಿಸಿ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಲಾಗಿದೆ. ಇದು ಭಾರತೀಯ ಚಿತ್ರರಂಗದಲ್ಲಿನ ಅತ್ಯುನ್ನತ ಗೌರವ.

ರಾಣಿ ಮುಖರ್ಜಿ ಅವರು ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಿದರು.