
ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ವೈರಲ್ ಆಗೋದು ಇತ್ತೀಚೆಗೆ ಸಾಮಾನ್ಯ ಎನಿಸಿಕೊಂಡಿದೆ. ಕೆಲವೊಮ್ಮೆ ಸೆಲೆಬ್ರಿಟಿಗಳೇ ಈ ಫೋಟೋಗಳನ್ನು ಹಂಚಿಕೊಂಡರೆ, ಇನ್ನೂ ಕೆಲವು ಫೋಟೋಗಳನ್ನು ಫ್ಯಾನ್ಸ್ ಹುಡುಕಿ ತೆಗೆದು ಹಂಚಿಕೊಳ್ಳುತ್ತಾರೆ.

ಈಗ ಕನ್ನಡ ಕಿರುತೆರೆಯ ಸ್ಟಾರ್ ನಟಿಯೊಬ್ಬರ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಅವರ ಫ್ಯಾನ್ ಪೇಜ್ಗಳಲ್ಲಿ ಈ ಫೋಟೋ ಹರಿದಾಡುತ್ತಿದೆ. ಹಾಗಾದರೆ ಅವರು ಯಾರು? ಇಲ್ಲಿದೆ ಉತ್ತರ.

ಈ ರೀತಿ ವೈರಲ್ ಆಗಿರೋದು ನಟಿ ಮೋಕ್ಷಿತಾ ಅವರ ಫೋಟೋ. ಬಿಗ್ ಬಾಸ್ ಮನೆಯಲ್ಲಿ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳಲಾಯಿತು. ಆ ಬೆನ್ನಲ್ಲೇ ಮೋಕ್ಷಿತಾ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಅವರ ಬಾಲ್ಯದ ಮತ್ತಷ್ಟು ಫೋಟೋಗಳನ್ನು ಹರಿಬಿಡಲಾಗಿದೆ.

ಮೋಕ್ಷಿತಾ ಅವರ ಬಾಲ್ಯದ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಈ ಫೋಟೋನ ಫ್ಯಾನ್ಸ್ ಸಾಕಷ್ಟು ಇಷ್ಟಪಟ್ಟಿದ್ದಾರೆ. ‘ಸಖತ್ ಕ್ಯೂಟ್ ಮೋಕ್ಷಿತಾ’ ಎಂದು ಬರೆದುಕೊಂಡಿದ್ದಾರೆ.

ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ರೀತಿಯಲ್ಲಿ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಅವರು ಫಿನಾಲೆವರೆಗೆ ಇದ್ದು ಕಪ್ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ಟಾಸ್ಕ್ನಲ್ಲೂ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ.