AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon: ಕೊಡಗಿನಲ್ಲಿ ಮುಂಗಾರು ರೈತರಿಗೆ ಕೈಕೊಟ್ಟಿದೆ, ಆದರೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ! ಏನಿದು ಪ್ರವಾಸದ ಮೋಡಿ

Madikeri rains: ಒಂದು ವೇಳೆ ಮಳೆ ಜಾಸ್ತಿ ಆದರೂ ಪರವಾಗಿಲ್ಲ. ರೇನ್ ಟೂರಿಸಂ ಇನ್ನೂ ಅದ್ಭುತವಾಗಿರುತ್ತದೆ! ಯಾಕಂದ್ರೆ ಮಳೆಗಾಲದಲ್ಲಿ ಕೊಡಗಿನ ಜಲಪಾತಗಳು ತುಂಬಿ ಧುಮ್ಮಿಕ್ಕುತ್ತವೆ. ಈ ಜಲಾಪತಗಳ ನೈಜ ಸೌಂದರ್ಯ ನೋಡಲು ಸಿಗುವುದೇ ಮಳೆಗಾಲದಲ್ಲಿ.

Gopal AS
| Updated By: ಸಾಧು ಶ್ರೀನಾಥ್​

Updated on: Jun 21, 2023 | 8:19 AM

ಹೇಳಿ ಕೇಳಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಇದು ರೈತಾಪಿ ವರ್ಗಕ್ಕೆ (farmers) ಭಾರೀ ಹೊಡೆತ ಕೊಟ್ಟಿದೆ. ಆದ್ರೆ ಪ್ರವಾಸೀ ಜಿಲ್ಲೆಗಳಲ್ಲಿ ಮಾತ್ರ ಇದು ಪ್ರವಾಸೋದ್ಯಮಿಗಳಿಗೆ ಲಾಭವನ್ನೇ ಮಾಡಿದೆ. ಅದ್ರಲ್ಲೂ ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ಮಳೆ ವಿಳಂಬವಾಗಿರೋದು ಪ್ರವಾಸಿಗರಿಗೆ ಸಖತ್ ಖುಷಿ ನೀಡಿದೆ.

1 / 10
ಕೊಡಗು ಜಿಲ್ಲೆಯಲ್ಲಿ (madikeri, kodagu) ಆರು ತಿಂಗಳು ಮಳೆಗಾಲ ಇದ್ದ (monsoon rains) ಕಾಲವೊಂದಿತ್ತು. ಅಂದ್ರೆ ಮೇ ತಿಂಗಳಿನಿಂದ ಆರಂಭವಾಗ್ತಾ ಇದ್ದ ವರ್ಷಧಾರೆ ಅಕ್ಟೋಬರ್ ವೆರಗೂ ಅಬ್ಬರಿಸ್ತಾ ಇತ್ತು.

2 / 10
ಆದ್ರೆ ಬದಲಾದ ಹವಾಮಾನದಿಂದಾಗಿ ಇದೀಗ ಮಳೆಗಾಲ ಮೂರು ತಿಂಗಳಿಗೆ ಬಂದು ನಿಂತಿದೆ. ಆದ್ರೂ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲೆಲ್ಲಾ ಮುಂಗಾರು ಮಳೆ ಶುರುವಾಗುವುದು ವಾಡಿಕೆಯಾಗಿತ್ತು. ಆದ್ರೆ ಇದೀಗ ಜೂನ್ 20 ಕಳೆದರೂ ಮಳೆಯ ಸುಳಿವೇ ಇಲ್ಲ. ದಿನಕ್ಕೆ ಒಂದೆರಡು ಬಾರಿ ಪಿರಿ ಪಿರಿ ಮಳೆ ಬರುವುದೇ ಹೆಚ್ಚು.

3 / 10
ಸಾಮಾನ್ಯವಾಗಿ ಪ್ರತಿ ವರ್ಷ ಮಳೆ ಆರಂಭವಾದ್ರೆ ಸಾಕು ಕೊಡಗಿನ ಪ್ರವಾಸೋದ್ಯಮ ಪಾತಾಳಕ್ಕೆ ಕುಸಿಯುತ್ತಿತ್ತು. ಜೂನ್ ನಿಂದ ಮೂರು ತಿಂಗಳು ಬಹಳ ಕಡಿಮೆ ಪ್ರವಾಸಿಗರು ಬರ್ತಾ ಇದ್ರು. ಆದ್ರೆ ಈ ಬಾರಿ ಮಳೆ ಕೈಕೊಟ್ಟಿರುವುದು ಪ್ರವಾಸಿಗರಿಗೆ ಖುಷಿ ನೀಡಿದೆ.

4 / 10
ಈಗಲೂ ವಾರದ ದಿನಗಳಲ್ಲೂ ಪ್ರವಾಸಿ ತಾಣದಲ್ಲಿ ಪ್ರವಾಸಿಗರು (tourists) ಎಂಜಾಯ್ ಮಾಡುವುದನ್ನ ನೋಡಬಹುದು.

5 / 10
ಮಡಿಕೇರಿ ರಾಜಾಸೀಟು, ಗದ್ದುಗೆ, ಅಬ್ಬಿಫಾಲ್ಸ್, ನೂತನ ಗ್ಲಾಸ್ ಬ್ರಿಡ್ಜ್, ಭಾಗಮಂಡಲ ತಲಕಾವೇರಿ, ದುಬಾರೆ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

6 / 10
ಹೊಸ ಆಕರ್ಷಣೆ ನೂತನ ಗ್ಲಾಸ್​​ ಹೌಸ್​​

ಹೊಸ ಆಕರ್ಷಣೆ ನೂತನ ಗ್ಲಾಸ್​​ ಹೌಸ್​​

7 / 10
 ಒಂದು ವೇಳೆ ಮಳೆ ಜಾಸ್ತಿ ಆದರೂ ಪರವಾಗಿಲ್ಲ. ರೇನ್ ಟೂರಿಸಂ ಇನ್ನೂ ಅದ್ಭುತವಾಗಿರುತ್ತದೆ! ಯಾಕಂದ್ರೆ ಮಳೆಗಾಲದಲ್ಲಿ ಕೊಡಗಿನ ಜಲಪಾತಗಳು ತುಂಬಿ ಧುಮ್ಮಿಕ್ಕುತ್ತವೆ.

8 / 10
ಇದರಿಂದ ಜಿಲ್ಲೆಯ ಹೋಂಸ್ಟೇ ರೆಸಾರ್ಟ್ ಗಳು ಕೂಡ ಉತ್ತಮ ವ್ಯಾಪಾರ ಮಾಡುತ್ತಿವೆ. ಉರಿ ಬಿಸಿಲಿನಿಂದ ಮುಕ್ತಿ ಪಡೆದ ಮಂಜು ಮೋಡದ ವಾತಾವರಣದಲ್ಲಿ ಪ್ರವಾಸಿಗರು ವಿವಿಧ ಚಟುವಟಿಕೆಗಳನ್ನ ಮಾಡ್ತಾ ಎಂಜಾಯ್ ಮಾಡ್ತಾ ಇದ್ದಾರೆ.

9 / 10
ಈ ಜಲಪಾತಗಳ ನೈಜ ಸೌಂದರ್ಯ ನೋಡಲು ಸಿಗುವುದೇ ಮಳೆಗಾಲದಲ್ಲಿ. ಹಾಗಾಗಿ ಬಹಳಷ್ಟು ಪ್ರವಾಸಿಗರು ಜೂನ್ ಜುಲೈ ಆಗಸ್ಟ್​ ತಿಂಗಳಲ್ಲಿ ಬರುವುದೂ ಇದೆ. ಒಟ್ಟಾರೆ, ಕೊಡಗು ಜಿಲ್ಲೆಗೆ ಪ್ರವಾಸ ಬರುವವವರಿಗೆ ಇದು ಉತ್ತಮ ಸಮಯ ಎಂಬುದು ನಿಜ.

10 / 10
Follow us