
ಕೆಜಿಎಫ್ ಬೆಡಗಿ ಮೌನಿ ರಾಯ್ ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ದೊಡ್ಡ ಹೆಸರು.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಇರುವ ಮೌನಿ, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಮೌನಿ, ಸಖತ್ ಬೋಲ್ಡ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಈ ಚಿತ್ರಗಳು ವೈರಲ್ ಆಗಿವೆ.

ಮೌನಿ ಕಿರುತೆರೆಯಿಂದ ಬಾಲಿವುಡ್ ಪ್ರವೇಶ ಮಾಡಿದ್ದು, ಅಕ್ಷಯ್ ಕುಮಾರ್ ನಟನೆಯ ಗೋಲ್ಡ್ ಚಿತ್ರದ ಮೂಲಕ. ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

ಮೌನಿ ರಾಯ್ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ. ಹಾಡುಗಾರ್ತಿ, ಕಥಕ್ ಡಾನ್ಸರ್ ಕೂಡ ಹೌದು.

ನಟನೆಯಲ್ಲಿ ಸಕ್ರಿಯರಾಗಿರುವುದರ ಜೊತೆಜೊತೆಗೆ ಮಾಡೆಲಿಂಗ್ನಲ್ಲೂ ಮೌನಿ ಗುರುತಿಸಿಕೊಂಡಿದ್ದಾರೆ.

ಮೌನಿ ‘ಲಂಡನ್ ಕಾನ್ಫಿಡೆನ್ಷಿಯಲ್’ ಎಂಬ ಒಟಿಟಿಯಲ್ಲಿ ಬಿಡುಗಡೆಯಾದ ಚಿತ್ರದಲ್ಲೂ ನಟಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮೌನಿ ರಾಯ್ಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿದ್ದು, ನಾಗಿಣಿ 1 ಹಾಗೂ ನಾಗಿಣಿ 2 ಧಾರವಾಹಿಗಳು.

‘ನಾಗಿಣಿ’ಯ ಯಶಸ್ಸಿನ ನಂತರ ಅವರಿಗೆ ಬಾಲಿವುಡ್ನ ಹೆಬ್ಬಾಗಿಲು ತೆರೆಯಿತು. ಸದ್ಯ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.