Pro Kabaddi League 2021: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ
Pro Kabaddi League 2021 Schedule: ಮೊದಲಾರ್ಧದಲ್ಲಿ ಒಟ್ಟು ಏಳು ಟ್ರಿಪಲ್ ಹೆಡರ್‌ಗಳು ನಡೆಯಲಿದ್ದು, ಮೊದಲ ದಿನದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ ಸೆಣಸಲಿದೆ.
Updated on:Dec 01, 2021 | 3:53 PM

ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೊ ಕಬಡ್ಡಿ ಲೀಗ್ 2021ರ ಸೀಸನ್ ಡಿಸೆಂಬರ್ 22 ರಿಂದ ಬೆಂಗಳೂರಿನಲ್ಲಿ ಶುರವಾಗಲಿದೆ. 8ನೇ ಸೀಸನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಇನ್ನು ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.

ಇನ್ನು ಮೊದಲಾರ್ಧದಲ್ಲಿ ಒಟ್ಟು ಏಳು ಟ್ರಿಪಲ್ ಹೆಡರ್‌ಗಳು ನಡೆಯಲಿದ್ದು, ಮೊದಲ ದಿನದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ ಸೆಣಸಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಯುಪಿ ಯೋಧಾ ವಿರುದ್ಧ ಆಡಲಿದೆ. ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಈ ಕೆಳಗಿನಂತಿವೆ.

Pro Kabaddi League 2021 Schedule

Pro Kabaddi League 2021 Schedule

Pro Kabaddi League 2021 Schedule

Pro Kabaddi League 2021 Schedule

Pro Kabaddi League 2021 Schedule

Pro Kabaddi League 2021 Schedule

Pro Kabaddi League 2021 Schedule
Published On - 3:49 pm, Wed, 1 December 21



















