ಹೌದು, ಈ ಬಾರಿ ಆರ್‌ಸಿಬಿ ವಿರಾಟ್ ಕೊಹ್ಲಿಗೆ ನೀಡುತ್ತಿರುವುದು 15 ಕೋಟಿ ರೂ. ಮಾತ್ರ. ಆದರೆ 2018 ರಿಂದ ಕೊಹ್ಲಿಗೆ ಆರ್‌ಸಿಬಿ ನೀಡುತ್ತಿರುವುದು ಬರೋಬ್ಬರಿ 17 ಕೋಟಿ ರೂ. ಆದರೆ ಈ ಬಾರಿ 2 ಕೋಟಿ ರೂ. ಅನ್ನು ಕೊಹ್ಲಿ ಕಡಿತಗೊಳಿಸಿದ್ದಾರೆ. ಏಕೆಂದರೆ ಈ ಬಾರಿ 33 ಕೋಟಿಯೊಳಗೆ 3 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಕೊಹ್ಲಿ ಕೂಡ ತಮ್ಮ ಮೊತ್ತವನ್ನು 15 ಕೋಟಿಗೆ ಇಳಿಸಿದ್ದಾರೆ.