AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್

IPL 2022 retention: ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕಡಿಮೆ ಮೊತ್ತ ಪಡೆದಿರುವ ಕಾರಣ ಇದೀಗ ಆರ್​​ಸಿಬಿ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ತಂಡವು ಮೆಗಾ ಹರಾಜಿಗಾಗಿ ಒಟ್ಟು 57 ಕೋಟಿ ಉಳಿದಿದೆ.

TV9 Web
| Edited By: |

Updated on: Dec 01, 2021 | 5:53 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿದೆ. ಅದರಲ್ಲೂ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಆರ್​ಸಿಬಿ ಯಶಸ್ವಿಯಾಗಿದೆ. ಅದು ಕೂಡ ಕಡಿಮೆ ಮೊತ್ತ ನೀಡಿ ಸ್ಟಾರ್ ಆಟಗಾರರನ್ನು ಒಪ್ಪಿಸುವ ಮೂಲಕ ಎಂಬುದು ವಿಶೇಷ.

1 / 6
ಹೌದು,  ಈ ಬಾರಿ ಆರ್​ಸಿಬಿ ವಿರಾಟ್ ಕೊಹ್ಲಿಗೆ ನೀಡುತ್ತಿರುವುದು 15 ಕೋಟಿ ರೂ. ಮಾತ್ರ. ಆದರೆ 2018 ರಿಂದ ಕೊಹ್ಲಿಗೆ ಆರ್​ಸಿಬಿ ನೀಡುತ್ತಿರುವುದು ಬರೋಬ್ಬರಿ 17 ಕೋಟಿ ರೂ. ಆದರೆ ಈ ಬಾರಿ 2 ಕೋಟಿ ರೂ. ಅನ್ನು ಕೊಹ್ಲಿ ಕಡಿತಗೊಳಿಸಿದ್ದಾರೆ. ಏಕೆಂದರೆ ಈ ಬಾರಿ 33 ಕೋಟಿಯೊಳಗೆ 3 ಆಟಗಾರರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಕೊಹ್ಲಿ ಕೂಡ ತಮ್ಮ ಮೊತ್ತವನ್ನು 15 ಕೋಟಿಗೆ ಇಳಿಸಿದ್ದಾರೆ.

2 / 6
ವಿರಾಟ್ ಕೊಹ್ಲಿಯು ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಗೆ ದುಡ್ಡಿಗಿಂತ ಆರ್​​ಸಿಬಿ ತಂಡವೇ ಮುಖ್ಯ. ಹೀಗಾಗಿ ಅವರು ಕಡಿಮೆ ಮೊತ್ತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರ್‌ಸಿಬಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.

3 / 6
ಇನ್ನೊಂದೆಡೆ ಕಳೆದ 14 ಕೋಟಿ 25 ಲಕ್ಷ ರೂ. ಪಡೆದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿ 11 ಕೋಟಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅಂದರೆ ಕಳೆದ ಬಾರಿಗಿಂತ ಮ್ಯಾಕ್ಸ್​ವೆಲ್ 3 ಕೋಟಿ ಕಡಿಮೆ ಮೊತ್ತಕ್ಕೆ ಓಕೆ ಅಂದಿದ್ದಾರೆ. ಇಲ್ಲಿ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಆರ್​ಸಿಬಿ ಫ್ರಾಂಚೈಸಿ ನೀಡಿದ ಆಫರ್​ ಅನ್ನು ಸ್ವೀಕರಿಸಿ ತಂಡದಲ್ಲೇ ಉಳಿದುಕೊಳ್ಳಲು ಬಯಸಿದ್ದಾರೆ.

4 / 6
ಇದಾಗ್ಯೂ ಕಡಿಮೆ ಮೊತ್ತದ ನೆಪವೊಡ್ಡಿ ಇಬ್ಬರೂ ಆಟಗಾರರು ಆರ್​ಸಿಬಿ ತಂಡವನ್ನು ತೊರೆದಿಲ್ಲ ಎಂಬುದು ವಿಶೇಷ. ಏಕೆಂದರೆ ಈ ಬಾರಿ ಎರಡು ಹೊಸ ಫ್ರಾಂಚೈಸಿಗಳಿದ್ದು, ಇಬ್ಬರು ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರೆ ದೊಡ್ಡ ಮೊತ್ತ ಸಿಗುತ್ತಿತ್ತು. ಇದಾಗ್ಯೂ ಕೊಹ್ಲಿ-ಮ್ಯಾಕ್ಸ್​ವೆಲ್ ಕಡಿಮೆ ಮೊತ್ತ ಪಡೆದು ಆರ್​ಸಿಬಿಯಲ್ಲೇ ಮುಂದುವರೆಯಲು ಒಪ್ಪಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

5 / 6
 ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕಡಿಮೆ ಮೊತ್ತ ಪಡೆದಿರುವ ಕಾರಣ ಇದೀಗ ಆರ್​​ಸಿಬಿ ತಂಡಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ತಂಡವು ಮೆಗಾ ಹರಾಜಿಗಾಗಿ ಒಟ್ಟು  57 ಕೋಟಿ ಉಳಿದಿದೆ. ಈ ಮೊತ್ತದೊಂದಿಗೆ ಆರ್​ಸಿಬಿ ತಂಡವು ಬಲಿಷ್ಠ ತಂಡವನ್ನು ಕಟ್ಟುವ ಇರಾದೆಯಲ್ಲಿದೆ.

6 / 6
Follow Us
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ

ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್

ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?

ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ

ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ

ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು

ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!