
ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ಈ ವಾರ ಚಿತ್ರಮಂದಿರಗಳಿಗೆ ಬಂದಿದೆ. ಕ್ರಿಕೆಟ್ ಬೆಟ್ಟಿಂಗ್ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಟ್ರೈಲರ್, ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಡಾರ್ಲಿಂಗ್ ಕೃಷ್ಣ ಮತ್ತು ತಂಡ ಸಹ ಒಳ್ಳೆಯ ಪ್ರಚಾರ ಮಾಡಿದೆ.

ಕೋಮಲ್ ಮತ್ತು ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ನಟಿಸಿರುವ ‘ಕೋಣ’ ಸಿನಿಮಾ ಈ ವಾರ ತೆರೆಗೆ ಬಂದಿದೆ. ತನಿಷಾ ಕುಪ್ಪಂದ ನಾಯಕಿಯಾಗಿ ನಟಿಸಿರುವ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಬಹಳ ಗಮನ ಸೆಳೆದಿದೆ.

‘ಒಮೆನ್’ ಹೆಸರಿನ ಥ್ರಿಲ್ಲರ್ ಕನ್ನಡ ಸಿನಿಮಾ ಒಂದು ನಾಳೆಯೇ ಬಿಡುಗಡೆ ಆಗುತ್ತಿದೆ. ಕೊಲೆಯ ಜಾಡು ಹಿಡಿದು ಹೋಗುವ ನಾಯಕನ ಕತೆಯನ್ನು ಸಿನಿಮಾ ಒಳಗೊಂಡಿದೆ. ಅಜಯ್ ಕುಮಾರ್ ನಾಯಕ, ನಿಶ್ಮಾ ಶೆಟ್ಟಿ ನಾಯಕಿ. ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುತ್ತಿದೆ.

‘ಬಾಹುಬಲಿ: ದಿ ಬಿಗಿನಿಂಗ್’, ‘ಬಾಹುಬಲಿ: ದಿ ಕನ್ಕ್ಲೂಷನ್’ ಎರಡನ್ನೂ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದ್ದು, ನಾಳೆ (ಶುಕ್ರವಾರ) ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ.

ತೆಲುಗಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ರವಿತೇಜ ಮತ್ತು ಕನ್ನಡತಿ ಶ್ರೀಲೀಲಾ ಒಟ್ಟಿಗೆ ನಟಿಸಿರುವ ‘ಮಾಸ್ ಜಾತರ’ ಸಿನಿಮಾ ನಾಳೆ (ಅಕ್ಟೋಬರ್ 31) ಬಿಡುಗಡೆ ಆಗುತ್ತಿದೆ. ಪಕ್ಕಾ ಮಾಸ್-ಮಸಾಲಾ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಮೋಹನ್ಲಾಲ್ ಪುತ್ರ ಪ್ರಣವ್ ಮೋಹನ್ಲಾಳ್ ನಟನೆಯ ಕುತೂಹಲಕಾರಿ ಹಾರರ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ವಿಚಿತ್ರ ಹೆಸರಿನ ‘ಡೈಸ್ ಇರಾಯ್’ ಮಲಯಾಳಂ ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ಮೋಹನ್ಲಾಲ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರಂತೆ.

ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಆರ್ಯನ್’ ಸಹ ನಾಳೆ (ಅಕ್ಟೋಬರ್ 31) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ವಿಷ್ಣು ವಿಜಯನ್ ನಾಯಕ, ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿ. ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ.

ಪರೇಶ್ ರಾವಲ್ ನಟನೆಯ ‘ದಿ ತಾಜ್ ಸ್ಟೋರಿ’ ಸಿನಿಮಾ ಸಹ ನಾಳೆ (ಶುಕ್ರವಾರ) ಬಿಡುಗಡೆ ಆಗಲಿದೆ. ತಾಜ್ ಮಹಲ್ನ ಮೂಲದ ಕುರಿತಾದ ಚರ್ಚೆಯನ್ನು ಈ ಸಿನಿಮಾನಲ್ಲಿ ಮಾಡಲಾಗಿದೆ. ಸಿನಿಮಾ ವಿವಾದವನ್ನೂ ಸೃಷ್ಟಿ ಮಾಡಿದೆ.