ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ
ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹೆಚ್ಚಾಗಿದೆ. ವಿದ್ಯಾರ್ಥಿಗಳ ನಡುವೆ ದ್ವೇಷ ಹುಟ್ಟಿದೆ. ಸದ್ಯ ಹೈಕೋರ್ಟ್ ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹೈಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೆ ಶಾಲೆ, ಕಾಲೇಜುಗಳಲ್ಲಿ ಕೇಸರಿ ಶಾಲು, ಹಿಜಾಬ್ ನಂತರ ಧಾರ್ಮಿಕ ಗುರುತುಗಳನ್ನು ಧರಿಸುವುದು ಸೂಕ್ತವಲ್ಲವೆಂದು ತಿಳಿಸಿದೆ. ಆದ್ರೆ ದೇಶದ ಉತ್ತಮ ಪ್ರಜೆಗಳಾಗಬೇಕಿದ್ದ ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿದ್ದಾರೆ. ಹಿಜಾಬ್ ಹಾಗೂ ಕೇಸರಿ ಕಲಹ ವಿಚಾರಕ್ಕೆ ಸಂಬಂಧಿಸಿ ಮೈಸೂರು ಕಲಾವಿದ ರಾಹುಲ್ ಚಿತ್ರ ಬಿಡುಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
Updated on:Feb 11, 2022 | 3:29 PM

mysore artist spread Awareness by wall drawing on hijab row

mysore artist spread Awareness by wall drawing on hijab row

ದೇವರಾಜ ಮೊಹಲ್ಲಾದ ಕೊತ್ವಾಲ ರಾಮಯ್ಯ ರಸ್ತೆಯ ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿರುವ ಕಲಾವಿದ ರಾಹುಲ್

ಶಾಲೆ ಜ್ಞಾನ ದೇಗುಲ ಜ್ಞಾನ ಸಂಪಾದನೆಗಾಗಿ ಇರುವುದು. ಇದು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಶಾಂತಿ ನೆಲೆಸಬೇಕು. ಶಾಲೆಗಳಲ್ಲಿ ಪ್ರತಿಭಟನೆ ಬೇಡ ಎಂಬ ಸಂದೇಶ ಸಾರಿದ್ದಾರೆ. ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಚಿತ್ರ ಬಿಡಿಸಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ಇರಬೇಕೆಂಬ ಜಾಗೃತಿ ಮೂಡಿಸಿದ್ದಾರೆ.

ಒಮ್ಮೆ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂರಿಗೆ ದೀಪ ಬೆಳಗಲು ಹೇಳಿದ್ರಂತೆ. ದೀಪ ಹಚ್ಚಿದ ಬಳಿಕ ನಗುತ್ತ ಕಲಾಂ ಹೇಳಿದ್ರು, ನಾನು ಮುಸ್ಲಿಂ, ನಾನು ಕ್ರಿಸ್ಟಿಯನ್ರ ಕ್ಯಾಂಡಲ್ ಮೂಲಕ ಹಿಂದೂರ ಜ್ಯೋತಿ ಬೆಳಗುತ್ತಿದ್ದೇನೆ. ಇದೇ ರೀತಿಯ ಏಕತೆ ನಮ್ಮ ದೇಶದಲ್ಲಿರಬೇಕು ಎಂದು. ಇದೇ ಸಂದೇಶವನ್ನು ಸಾರುತ್ತಿದೆ ಈ ಚಿತ್ರ
Published On - 3:19 pm, Fri, 11 February 22




