
ಅಕ್ಟೋಬರ್ ಎರಡರಂದು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯುಗೆ ಹೊರಿಸಲಾಗುತ್ತದೆ. ಹೀಗಾಗಿ ತಾಲೀಮಿನಲ್ಲಿ ಅಭಿಮನ್ಯುಗೆ ಸುಮಾರು 200 ಕೆ.ಜಿ ತೂಕದ ಮರದ ಅಂಬಾರಿಯನ್ನು ಕಟ್ಟಿ, 400 ಕೆ.ಜಿ. ಭಾರದ ಮರಳು ಮೂಟೆ ಹಾಕಿ 100 ಕೆ.ಜಿ ನಮ್ದ ಹೊರಿಸಿ ತಾಲೀಮು ನಡೆಸಲಾಯ್ತು.

ಮರದ ಅಂಬಾರಿ ಹೊತ್ತ ಅಭಿಮನ್ಯು ಜೊತೆ ಉಳಿದ ಆನೆಗಳೂ ಪಾಲ್ಗೊಂಡಿದ್ದವು. ಅಭಿಮನ್ಯು ಆನೆಗೆ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಹೇಮಾವತಿ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದವು. ಉಳಿದಂತೆ ಭೀಮ, ಗೋಪಿ, ಪ್ರಶಾಂತ, ಕಂಜನ್,ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ, ರೂಪ ಸೇರಿದಂತೆ ಒಟ್ಟು 14 ಆನೆಗಳು ಸಹ ತಾಲೀಮಿನಲ್ಲಿ ಹೆಜ್ಜೆ ಹಾಕಿದವು

ದಸರಾದ ಪ್ರಯುಕ್ತ ತಾಲೀಮಿನ ಸಂದರ್ಯಾಭದಲ್ಲಿ ಯಾವುದೇ ವಿಘ್ನ ಸಂಭವಿಸದಂತೆ ಪೂಜೆ ನೆರವೇರಿಸಲಾಯಿತು.

ಅರಮನೆ ಕೋಟೆ ಆಂಜನೇಯಸ್ವಾಮಿ ದ್ವಾರದ ಮೂಲಕ ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್ ನಗರ ಬಂಬೂಬಜಾರ್ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಮರದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.

ಮೈಸೂರು ಅರಮನೆಯಲ್ಲಿ ದಸರಾ ತಯಾರಿ ಜೋರಾಗಿದೆ. ಅದರೊಂದಿಗೆ ಸಿಂಹಾಸನ ಜೋಡಣೆ ಕೆಲಸವೂ ಭರದಿಂದ ನಡೆಯುತ್ತಿದೆ

ನಾಡಹಬ್ಬ ದಸರಾಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆಯ ಕಾರ್ಯ ನೆರವೇರುತ್ತಿದೆ.
Published On - 5:37 pm, Wed, 17 September 25