- Kannada News Photo gallery People who specially wished Prime Minister Modi on TV9 Kannada social media
ಟಿವಿ9 ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ತಿಳಿಸಿದ ಜನ
Narendra Modi Birthday: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳುತ್ತಿದ್ದಾರೆ. ದೇಶದ ಹಾಗೂ ಜಗತ್ತಿನ ನಾಯಕರು ಸೇರಿದಂತೆ ಜನ ಸಾಮಾನ್ಯರು ಕೂಡ ಮೋದಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ಮೋದಿ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಪೋಸ್ಟ್ ಒಂದನ್ನು ಮಾಡಿ ಇಲ್ಲಿ ಶುಭಾಶಯಗಳನ್ನು ಹೇಳುವಂತೆ ಕೇಳಿತ್ತು. ಇದೀಗ ಮೋದಿ ಅವರ ಜನ್ಮ ದಿನಕ್ಕೆ ಟಿವಿ9 ಫಾಲೋವರ್ಸ್ ಭರಪೂರವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ಅದರಲ್ಲಿ ಕೆಲವೊಂದು ವಿಶೇಷ ಶುಭಾಶಯಗಳು ಇಲ್ಲಿದೆ ನೋಡಿ.
Updated on:Sep 17, 2025 | 11:22 AM

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೆ ನಿಮ್ಮ ಹುಟ್ಟಿದ ದಿನಕ್ಕೆ ಶುಭಾಶಯಗಳು. ಮತ್ತು ದೊಡ್ಡವರು ಹೇಳಿದ ಮಾತು. ಹುಟ್ಟಿದ ದಿನ ದರಿದ್ರ ಆದ್ರೂ, ಸಾವು ಚರಿತ್ರೆ ಹಾಗಿರ್ಬೇಕು. ನಿಮ್ಮದು ಹಾಗುತ್ತೆ. ದೇವರು ಇದಾನೆ

ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ನಮ್ಮ ದೇಶದ ಸಂಸ್ಕೃತಿ ಹಾಗೂ ಹಿಂದೂ ಸನಾತನ ಧರ್ಮದ ಅರಿವು ಮೂಡಿಸಿದ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜನುಮ ದಿನದ ಶುಭಾಶಯಗಳು

ಶುಭಾಶಯಗಳು ನಮ್ಮ ಸಂಸ್ಕೃತಿಯ ಪರಂಪರೆಯ ಅನಾವರಣಕೆ ಹಾಗೂ ದೇಶದ ಸಮಗ್ರ ಪ್ರಗತಿಗೆ ಕಾರಣರಾದ ನಿಮಗೆ ಆ ಭಗವಂತ ಇನ್ನು ಹೆಚ್ಚು ಆಯುಷ್ಯ ಹಾಗೂ ಆರೋಗ್ಯ ನೀಡಿಲಿ, ಹುಟ್ಟುಹಬ್ಬದ ಶುಭಾಶಯಗಳು ಸರ್

ಹಿಂದೂ ಹೃದಯ ಸಾಮ್ರಾಟ, ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವ ಕಂಡ ಧೀರೋದ್ದಾತ ನಾಯಕ ನೋಬೆಲ್ ಪ್ರಶಸ್ತಿ ಪಡೆಯುವ ಭಾರತದ ಮೊಟ್ಟ ಮೊದಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು ನಮೋ ನಮಃ....

ನನ್ನ ಪ್ರೀತಿಯ ಈ ದೇಶದ ನಿಷ್ಠಾವಂತ ಹೆಮ್ಮೆಯ ಗೌರವಾನ್ವಿತ ಪ್ರಧಾನಿ ಮೋದಿಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ. ಇನ್ನು ನಿಮ್ಮ ಪ್ರಾಮಾಣಿಕ ಸೇವೆ ಈ ದೇಶದ ನಮ್ಮಂತ ಸಾಮಾನ್ಯ ಜನರಿಗೆ ತುಂಬಾ ಅವಶ್ಯಕವಾಗಿದೆ. ಇನ್ನು ಎಂದು ನೂರು ಕಾಲ ಚೆನ್ನಾಗಿರಬೇಕು ನೀವು ಈ ದೇಶದ ಸೇವೆಯನ್ನು ಪ್ರಧಾನಿಯಾಗಿ ಮುಂದುವರೆಸಿ ಎಂಬುದು ನಮ್ಮ ಆಶಯ ಜೈ ಮೋದಿಜಿ... ಜೈ ಭಾರತ ಮಾತೆ

ಮೋದಿಜಿ ಹ್ಯಾಪಿ ಬರ್ತಡೆ ದೇವರು ನಿಮಗೆ ಆರೋಗ್ಯ ಕೊಡಲಿ, ನಮ್ಮ ದೇಶನ ನಂಬರ್ ಒನ್ ಸ್ಥಾನಕ್ಕೆ ತಗೊಂಡು ಹೋಗಬೇಕು ನೀವು ವಿಶ್ವ ನಾಯಕ ಆಗಬೇಕೆಂಬ ಬಯಕೆ ನಿಮ್ಮಿಂದ ನಮ್ಮ ದೇಶದ ಹಾರ್ದಿಕತೆ ಮುನ್ನುಡಿ ಬರೆಯುತ್ತಿದೆ ಕೆಲವು ಜನಗಳು ಬಾಯಿಗೆ ಬಂದಾಗ ಮಾತಾಡಿದ್ರು ಸಹ ಯಾವುದಕ್ಕೂ ಜಗ್ಗದೆ ದೇಶ ಮುನ್ನಡೆಸಿಕೊಂಡು ಹೋಗಿ ನಿಮಗೆ ಆ ದೇವರು ಆರೋಗ್ಯ ಕೊಟ್ಟು ಸಕಲ ಐಶ್ವರ್ಯ ಕೊಟ್ಟು ದೇವರು ಕಾಪಾಡಲಿ

ಜಗತ್ತಿನ ಮುಂದೆ ಭಾರತವನ್ನು ಪ್ರಜ್ವಲಿಸುವಂತೆ ಮಾಡಿ ಈ ಭರತ ಭೂಮಿಯಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುತ್ತಿರುವ ಭಾರತೀಯ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಆಡಳಿತದಲ್ಲಿ ಭಾರತವು ಮತ್ತಷ್ಟು ಉತ್ತುಂಗಕೇರಲಿ.

ವಿಶ್ವ ಕೀರ್ತಿ ಭಾರತ ಪ್ರಜಾ ಸ್ಫೂರ್ತಿ ಅಂತಾರಾಷ್ಟ್ರೀಯ ಇಪ್ಪತ್ತೆಂಟು ದೇಶಗಳ ಅತ್ಯುನ್ನತ ಪ್ರಶಸ್ತಿ ಭೂಷಿತ ಭಾರತವೇ ಮನೆ ಜನರೇ ಕುಟುಂಬ ಅವರ ಕಲ್ಯಾಣವೇ ಕಾಯಕ ಅಂತ ದಿನದ 24 ತಾಸು ದೇಶದ ಚಿಂತನೆ ಯಲ್ಲಿ ನಿದ್ದೆ ಇಲ್ಲದೆ ರಾತ್ರಿ ಕಳೆಯುವ ರಜೆ ಇಲ್ಲದೆ ದಣಿವರಿಯದ ಹಿಂದೆ ಯೂ ಮುಂದೆ ಯಾರೂ ಸಿಗದ ಅಪರೂಪದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ನಿಮ್ಮಂತ ಪ್ರಧಾನಿ ದೇಶಕ್ಕೆ ದೊರೆತಿರುವುದು ಈ ದೇಶದ ಪುಣ್ಯ. ಭಾರತಾಂಬೆಯ ನಿಜವಾದ ಸುಪುತ್ರರು ನೀವು. ನೂರುವರ್ಷಗಳ ಸಂತೃಪ್ತ ಜೀವನ ನಿಮಗಿರಲಿ, ನೊರು ವರ್ಷವೂ ನೀವೇ ಪ್ರಧಾನಿಗಳಾಗಿರುವಂತೆ ಆಗಲಿ, ಭಾರತ ಭ್ರಷ್ಟರಿಂದ ಮುಕ್ತವಾಗಲಿ ಮತ್ತು ಈ ದೇಶಕ್ಕೆ ಹಿಂದೂ ದೇಶವಾಗಿ ಅಧಿಕೃತ ಘೋಷಣೆಯನ್ನು ನೀವೇ ಮಾಡುವ್ಸಂತಾಗಲಿ.
Published On - 11:21 am, Wed, 17 September 25




