ಪ್ರಧಾನಿ ಮೋದಿ 75ನೇ ಜನ್ಮದಿನದ ಅಂಗವಾಗಿ 75 ಲಕ್ಷ ಸಸಿ ನೆಡುವ ಕಾರ್ಯಕ್ಕೆ ಚಾಲನೆ ಕೊಟ್ಟ ಧರ್ಮೇಂದ್ರ ಪ್ರಧಾನ್
ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 75ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಪಕ್ಷಗಳ ನಾಯಕರು, ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಮಾತ್ರವಲ್ಲದೆ ವಿದೇಶಗಳ ಅಧ್ಯಕ್ಷರು, ಪ್ರಧಾನಿಗಳು ಕೂಡ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇನ್ನೊಂದೆಡೆ ಒಡಿಶಾದಲ್ಲಿ 75 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಮೋದಿಯವರ 75ನೇ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗಿದೆ. ಇನ್ನು ಈ ಸಸಿ ನಡೆಯುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ ಒಡಿಶಾದಲ್ಲಿ 75 ಲಕ್ಷ ಸಸಿ ನೆಡುವ ಅಭಿಯಾನ ನಡೆದಿದ್ದು, ಇಂದು (ಸೆಪ್ಟೆಂಬರ್ 17) ಮೋದಿಯವರ ಹುಟ್ಟುಹಬ್ಬದಂದೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
1 / 7
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದಂದು ಅವರಿಗೆ ಕೃತಜ್ಞತೆಯ ಸೂಚಕವಾಗಿ ಒಡಿಶಾ ಸರ್ಕಾರವು 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದ ಅಡಿಯಲ್ಲಿ ಇಂದು (ಸೆಪ್ಟೆಂಬರ್ 17) ಒಂದೇ ದಿನ ರಾಜ್ಯಾದ್ಯಂತ 75 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಇದಾಗಿದೆ.
2 / 7
ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬದಂದು ಒಡಿಶಾದಲ್ಲಿ 75 ಲಕ್ಷ ಮರಗಳನ್ನು ನೆಡಲಾಗುವುದು ಎಂದು ಸಿಎಂ ಮೋಹನ್ ಚರಣ್ ಮಾಝಿ ಘೋಷಿಸಿದ್ದರು. ಈ ಸಂಬಂಧ 'ಏಕ್ ಪೆಡ್ ಮಾ ಕೆ ನಾಮ್ 2.0' ಜೂನ್ 5 ರಂದು ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.
3 / 7
ಒಡಿಶಾದಾದ್ಯಂತ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಮತ್ತು ಕೃಷಿಯ ಜೊತೆಗೆ ಇತರ ವಿವಿಧ ಸರ್ಕಾರಿ ಇಲಾಖೆಗಳು, ಪಿಎಸ್‌ಯುಗಳು, ಎನ್‌ಜಿಒಗಳು, ಯುವ ಸಂಘಟನೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಭಾಗವಹಿಸಿದ್ದು, ಗಿಡ ನೆಟ್ಟು ಪ್ರಧಾನಿ ಮೋದಿ ಅವರಿಗೆ ಹುಟ್ಟಹಬ್ಬದ ಶುಭಾಶಯ ಕೋರಿವೆ.
4 / 7
ಎರಡನೇ ಆವೃತ್ತಿ 'ಏಕ್ ಪೆಡ್ ಮಾ ಕೆ ನಾಮ್ 2.0' ಜೂನ್ 5 ರಂದು ಉದ್ಘಾಟನೆಯಾಗಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. "ಕಳೆದ ವರ್ಷ 6.72 ಕೋಟಿ ಮರಗಳನ್ನು ನೆಡುವ ಮೂಲಕ ದೇಶದಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಈ ವರ್ಷ ಒಂದೇ ದಿನದಲ್ಲಿ 75 ಲಕ್ಷ ಮರಗಳು ಸೇರಿದಂತೆ 7.5 ಕೋಟಿ ಮರಗಳನ್ನು ನೆಡುವುದು ಗುರಿಯಾಗಿದೆ ಎಂದು ಸಿಎಂ ಮೋಹನ್ ಮಾಝಿ ತಿಳಿಸಿದ್ದಾರೆ.
5 / 7
ಕಳೆದ 11 ವರ್ಷಗಳಿಂದ ಪ್ರಧಾನಿ ಮೋದಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಒಡಿಶಾದ ಮೇಲೆ ಅವರಿಗಿರುವ ಬದ್ಧತೆ ಮತ್ತು ಪ್ರೀತಿಯಲ್ಲಿ ಕೊರತೆಯಿಲ್ಲ. ಅವರು ಕಳೆದ ಬಾರಿ ತಮ್ಮ ಹುಟ್ಟುಹಬ್ಬದ ವೇಳೆ ಒಡಿಶಾಗ ಭೇಟಿ ನೀಡಿದಾಗ ರಾಜ್ಯ ಮಹಿಳಾ ಸಬಲೀಕರಣಕ್ಕಾಗಿ ʼಸುಭದ್ರಾ ಯೋಜನೆʼಯನ್ನು ಜಾರಿ ಗೊಳಿಸಿದ್ದರು” ಹೀಗಾಗಿ ಅವರ ಜನ್ಮದಿನದಂದೇ 75 ಲಕ್ಷ ಸಸಿ ನೆಡುವ ಕಾರ್ಯ ಮಾಡಿದ್ದೇವೆ ಎಂದು ಮಾಝಿ ತಿಳಿಸಿದ್ದಾರೆ.
6 / 7
ಇನ್ನು ಸಸಿ ನೆಡುವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಇಡೀ ರಾಷ್ಟ್ರವು ತನ್ನದೇ ಆದ ರೀತಿಯಲ್ಲಿ ಶುಭಾಶಯ ತಿಳಿಸುತ್ತಿದೆ. ಇಂದು ನಾವು ಸಹ ಒಡಿಶಾದಲ್ಲಿ 75 ಲಕ್ಷ ಸಸಿಗಳನ್ನ ನೆಡಲು ಚಾಲನೆ ನೀಡಿದ್ದೇವೆ ಎಂದು ಹೇಳಿದರು.