Kannada News Photo gallery Nagar Panchami Celebrations in Gadag: womens distributed different kinds of food from house, Karnataka news in kannada
ಮುದ್ರಣ ಕಾಶಿ ಗದಗಿನಲ್ಲಿ ನಾಗರ ಪಂಚಮಿ ಸಂಭ್ರಮ: ಎಲ್ಲೆಲ್ಲೂ ರೊಟ್ಟಿ ಘಮಲು
ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು ಸಂಭ್ರಮ ಮನೆ ಮಾಡುತ್ತೆ. ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಲೆ ಹೀಗೆ ಎಲ್ಲವನ್ನು ಸಿದ್ಧ ಪಡಿಸುವ ಮಹಿಳೆಯರು ಮನೆ ಮನೆಗೆ ಹಂಚುತ್ತಾರೆ.
1 / 7
ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು ಸಂಭ್ರಮ ಮನೆ ಮಾಡುತ್ತೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಪಂಚಮಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಪಂಚಮಿಯ ಮೊದಲನೆ ದಿನ ಆಚರಿಸುವ ರೊಟ್ಟಿ ಹಬ್ಬವಂತೂ ಕುಟುಂಬ ಮಾತ್ರವಲ್ಲ ಅಕ್ಕಪಕ್ಕದ ಎಲ್ಲರನ್ನೂ ಒಂದೆಡೆ ಸೇರಿಸಿ ಮನಸ್ಸುಗಳನ್ನ ಗಟ್ಟಿಗೊಳಿಸುತ್ತೆ. ಹೀಗಾಗ ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲೂ ರೊಟ್ಟಿ ಘಮ ಘಮ ಜೋರಾಗಿದೆ.
2 / 7
ನಾಗರ ಪಂಚಮಿ ಬಂತವ್ವಾ ಸನಿಹಾಕ, ಅಣ್ಣ ಬರಲಿಲ್ಲವ್ವ ಇನ್ನೂ ಕರಿಲಾಕಾ. ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನ ಸಾರಿ ಸಾರಿ ಹೇಳುತ್ತೆ. ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.
3 / 7
ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಹಬ್ಬವಾಗಿದೆ. ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು, ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತೆ. ಮನೆಯ ಕುಟುಂಬದ ಸರ್ವ ಸದಸ್ಯರೆಲ್ಲರೂ ಒಂದೆಡೆ ಸೇರಿ ರೊಟ್ಟಿ ಹಬ್ಬ ಆಚರಣೆ ಮಾಡುವದರಿಂದ ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ.
4 / 7
ಉತ್ತರ ಕರ್ನಾಟಕದ ಭಕ್ಷ್ಯ ಭೋಜನಗಳಾದ ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ ಸೊಪ್ಪಿನ ಪಲ್ಲ್ಯೆ, ಕಡಲೆ ಕಾಳಿನ ಪಲ್ಲ್ಯೆ, ಬದನೆಕಾಯಿ, ಎಣ್ಣೆಗಾಯಿ ಪಲ್ಲ್ಯೆ, ಮಡಿಕೆ ಕಾಳು, ಹಿಟ್ಟಿನ ಪಲ್ಲ್ಯೆ, ಕೋಸಂಬರಿ, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಮೆಂತೆ ಸೊಪ್ಪು, ಕೆಂಪು ಖಾರದ ಚಟ್ನಿ,ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ತರಹೇವಾರಿ ಖಾದ್ಯಗಳನ್ನ ತಯಾರಿಸಲಾಗಿತ್ತು.
5 / 7
ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಹಾಗೂ ಬಂಧು ಮಿತ್ರರ ಮನೆಗಳಿಗೆ ತೆರಳಿ ತಾವು ತಯಾರಿಸಿದ ಎಲ್ಲ ವಿಧಧ ಖಾದ್ಯಗಳನ್ನ ಒಳಗೊಂಡ ರೊಟ್ಟಿ ಬುತ್ತಿಯನ್ನು ಮಹಿಳೆಯರು ಹಂಚಿ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನ ಹಂಚಿ ಬರುವದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.
6 / 7
ಉತ್ತರ ಕರ್ನಾಟಕದ ಹಬ್ಬಗಳು ಅಂದ್ರೆ ವಿಶೇಷ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ರೊಟ್ಟಿ ಪಂಚಮಿ ಅಂದ್ರೆ ಆ ಸಂಭ್ರಮ, ಸಡಗರವೇ ಬೇರೆ. ರೊಟ್ಟಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಾಗಿ ಎಲ್ಲ ತೆರೆನಾದ ರೊಟ್ಟಿಗಳು, ಪಲ್ಯಗಳು ತಯ್ಯಾರಿ ಮಾಡ್ತಾರೆ. ಈ ವಿಶೇಷ ಅಡುಗೆ ಘಮಲು ಇಡೀ ಜಿಲ್ಲೆಯಲ್ಲಿ ಘಮ ಘಮಿಸುತ್ತಿದೆ.
7 / 7
ಪ್ರೀತಿ, ವಿಶ್ವಾಸ, ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿ ವರ್ಷವೂ ಸಂಬಂಧ, ಸ್ನೇಹ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗ್ತಿವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ದೂರದ ಊರಿನಲ್ಲಿರುವವರು ಈ ಹಬ್ಬದ ನೆಪದಲ್ಲಾದರೂ ಕುಟುಂಬದ ಸದಸ್ಯರೊಂದಿಗೆ ಸೇರಿ, ಭಾವೈಕ್ಯತೆ ಜೊತೆ ಭಾತೃತ್ವ ಉಳಿಸಿಕೊಳ್ಳುತ್ತಿರುವದೇ ವಿಶೇಷ.