Major League Cricket 2025: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟಿ20 ಟೂರ್ನಿಯಲ್ಲಿ ಬ್ಯಾಟರ್ಗಳ ಸಿಡಿಲಬ್ಬರ ಮುಂದುವರೆದಿದೆ. 6 ತಂಡಗಳ ನಡುವಣ ಈ ಕದನದ ಮೊದಲ 4 ಪಂದ್ಯಗಳಲ್ಲೇ ಸಿಕ್ಸರ್ಗಳ ಸುರಿಮಳೆಯಾಗಿದೆ. ಅದರಲ್ಲೂ 2 ಪಂದ್ಯಗಳಲ್ಲೇ ಫಿನ್ ಅಲೆನ್ 23 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ಸಿಕ್ಸರ್ಗಳ ಸುರಿಮಳೆಯಾಗುತ್ತಿದೆ. ಪರಿಣಾಮ ಕೇವಲ 4 ಪಂದ್ಯಗಳ ಮುಕ್ತಾಯದ ವೇಳೆಗೆ 100 ಸಿಕ್ಸರ್ಗಳ ಗಡಿದಾಟಿದೆ. ಅಂದರೆ ಮೊದಲ 4 ಪಂದ್ಯಗಳಲ್ಲೇ ಬ್ಯಾಟರ್ಗಳು ನೂರಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ.
1 / 6
ಹೀಗೆ ಸಿಕ್ಸರ್ಗಳೊಂದಿಗೆ ಸಿಡಿಲಬ್ಬರದ ಪ್ರದರ್ಶಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸ್ಯಾನ್ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡದ ಆರಂಭಿಕ ದಾಂಡಿಗ ಫಿನ್ ಅಲೆನ್. 2 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅಲೆನ್ ಈವರೆಗೆ 23 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
2 / 6
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಸ್ಯಾನ್ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡದ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್ಗುರ್ಕ್. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಜೇಕ್ ಫ್ರೇಸರ್ ಮೆಕ್ಗುರ್ಕ್ 2 ಇನಿಂಗ್ಸ್ಗಳಲ್ಲಿ ಒಟ್ಟು 11 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
3 / 6
ಹಾಗೆಯೇ ವಾಷಿಂಗ್ಟನ್ ಫ್ರೀಡಂ ತಂಡದ ಪರ ಕಣಕ್ಕಿಳಿಯುತ್ತಿರುವ ನ್ಯೂಝಿಲೆಂಡ್ನ ಎಡಗೈ ದಾಂಡಿಗ ರಚಿನ್ ರವೀಂದ್ರ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಚಿನ್ ರವೀಂದ್ರ 2 ಇನಿಂಗ್ಸ್ಗಳಲ್ಲಿ ಒಟ್ಟು 9 ಸಿಕ್ಸರ್ ಬಾರಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
4 / 6
ಇನ್ನು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಡೆವೊನ್ ಕಾನ್ವೆ 6 ಸಿಕ್ಸರ್ ಬಾರಿಸಿದರೆ, ವಾಷಿಂಗ್ಟನ್ ಫ್ರೀಡಂ ತಂಡದ ಮಿಚೆಲ್ ಓವನ್ 5 ಸಿಕ್ಸ್ ಸಿಡಿಸಿದ್ದಾರೆ. ಹಾಗೆಯೇ ಎಂಐ ನ್ಯೂಯಾರ್ಕ್ ತಂಡದ ಅನುಭವಿ ಬ್ಯಾಟರ್ ಕೀರನ್ ಪೊಲಾರ್ಡ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಉನ್ಮುಕ್ತ್ ಚಂದ್ ಹಾಗೂ ಸ್ಯಾನ್ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಸಂಜಯ್ ಕೃಷ್ಣಮೂರ್ತಿ ತಲಾ 5 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ.
5 / 6
ಒಟ್ಟಿನಲ್ಲಿ ಮೇಜರ್ ಲೀಗ್ ಟಿ20 ಟೂರ್ನಿಯಲ್ಲಿ ಸಿಕ್ಸರ್ಗಳ ಸುರಿಮಳೆಯಾಗುತ್ತಿದ್ದು, ಟೂರ್ನಿಯ ಅಂತ್ಯಕ್ಕೆ ಸಿಕ್ಸರ್ಗಳ ಸಂಖ್ಯೆ ಸಾವಿರದ ಗಡಿದಾಟುವ ನಿರೀಕ್ಷೆಯಿದೆ. ಈ ಮೂಲಕ ಎಂಎಲ್ಸಿ 2025 ರಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆಯಾ ಕಾದು ನೋಡಬೇಕಿದೆ.