
ಲೂಸ್ ಮಾದ ಯೋಗಿ ಹಾಗೂ ಅಪೂರ್ವ ಭಾರದ್ವಾಜ್ ನಟನೆಯ ‘ನಾನು ಅದು ಮತ್ತು ಸರೋಜ’ ಚಿತ್ರ ಡಿಸೆಂಬರ್ 30ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ ಅಪೂರ್ವ.

ಅಪೂರ್ವ ಅವರು ಈ ಮೊದಲು ‘ಸತ್ಯಂ ಶಿವಂ ಸುಂದರಂ’, ‘ನೋಡಿದವರು ಏನಂತಾರೆ’, ‘ಉಪ್ಪಿನ ಕಾಗದ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ನಾನು ಅದು ಮತ್ತು ಸರೋಜ’ ಚಿತ್ರದ ‘ಸಂಪಿಗೆ ಮರದಲ್ಲಿ..’ ಹಾಡು ವೈರಲ್ ಆಗಿದೆ. ಈ ಹಾಡಿನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಅಪೂರ್ವ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಅಪೂರ್ವ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಮಂದಿ ಹಿಂಬಾಲಿಸುತ್ತಿದ್ದಾರೆ. ಸಿನಿಮಾ ನೋಡಿ ಎಂದು ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ.
Published On - 9:58 am, Tue, 27 December 22