
ಪೈಠಣೀ ಸೀರೆ : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ‘ಪೈಠಣ’ ಊರಿನಲ್ಲಿ ತಯಾರಾಗುವ ಒಂದು ವಿಶಿಷ್ಠವಾದ ಸೀರೆಯಿದು. ‘ಪೈಠಣಿ’ ಕೈಮಗ್ಗ ಸೀರೆಗಳ ಬಹುದೊಡ್ಡ ಕೇಂದ್ರವಾಗಿದೆ ಈ ಪೈಠಣಿ ಸೀರೆಗಳಲ್ಲಿ ಓರೆ ಮತ್ತು ಚೌಕುಳಿ ವಿನ್ಯಾಸ ಹಾಗೂ 40 ಅಂಗುಲಗಳ ಸೆರಗಿನ ಮೇಲೆ ಬಿಡಿಸಿದ ನವಿಲಿನ ಚಿತ್ರವಿದ್ದು, ಆದರೆ ಕಾಲ ಬದಲಾದಂತೆ ಇದರ ಬಣ್ಣ, ವಿನ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

ಕಾಂಜೀವರಂ ಸೀರೆ : ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಾಗುವ ಕೈಮಗ್ಗದ ರೇಷ್ಮೆ ಸೀರೆಗಳು ಶುದ್ಧ ರೇಷ್ಮೆಯ ಎಳೆಗಳಿಂದ ಸಿದ್ಧಗೊಳ್ಳುವುದೇ ವಿಶೇಷ. ಕಾಂಚೀಪುರ ಹಳ್ಳಿಯಲ್ಲಿಯೇ ಹುಟ್ಟಿಕೊಂಡ ಈ ಸೀರೆಯನ್ನು ನೇಯುವುದನ್ನೆ ಇಲ್ಲಿನವರು ಕಸುಬಾಗಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ದೇವಸ್ಥಾನ ವಿನ್ಯಾಸ, ದೈವಿಕ ಪ್ರಾಣಿ 'ಯಾಳಿ'ಯ ಚಿತ್ರ ಹಾಗೂ ನವಿಲಿನ ವಿನ್ಯಾಸಗಳು ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸೂತಿ ಸೀರೆ : ಕೈಮಗ್ಗದಿಂದ ಮಾಡಲ್ಪಡುವಂತಹ ಕಸೂತಿ ಸೀರೆಯು ಆಕರ್ಷಕವಾಗಿದ್ದು, ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಅದರೊಂದಿಗೆ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಹತ್ತಿ ಹಾಗೂ ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಷಾಪುರಿ ಸೀರೆ : ನೂರು ವರ್ಷಗಳ ಇತಿಹಾಸವಿರುವ ಸೀರೆಗಳ ಸಾಲಿನಲ್ಲಿ ಷಾಪುರಿ ಸೀರೆ ಕೂಡ ಸೇರಿದೆ. ಈ ಸೀರೆಯಲ್ಲಿ ಪಾಲಿಸ್ಟರ್ ದಾರವೇ ಮೂಲ ವಸ್ತುವಾಗಿದ್ದು, ಅಲ್ಲಲ್ಲಿ ಜರಿಯನ್ನು ಹಾಗೂ ನೂಲನ್ನೂ ಬಳಸಲಾಗುತ್ತದೆ. ಕೈ ಮಗ್ಗದಿಂದ ತಯಾರಿಸಲಾಗುವ ಈ ಸೀರೆಯಲ್ಲಿ ಸಣ್ಣ ಗೋಪುರದ ಅಂಚಿನಿಂದ ಆರಂಭಿಸಿ ಎಲ್ಲ ಬಗೆಯ ಅಂಚುಗಳು ಸೀರೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಈ ಷಾಪುರಿ ಸೀರೆಗೆ ಇಂತಹದ್ದೇ ವಿನ್ಯಾಸವಿಲ್ಲ.

ಇಳಕಲ್ ಸೀರೆ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಕಾಟನ್ ಸೀರೆಯೇ ಈ ಇಳಕಲ್ ಸೀರೆ. ಎಂಟನೆಯ ಶತಮಾನದಿಂದ ಆರಂಭವಾದ ಇಳಕಲ್ ಸೀರೆಯು ಇಂದಿಗೂ ಅಷ್ಟೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಈ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಮಾಡಲಾಗಿದ್ದು, ಸೀರೆಯ ಅಂಚಿನ ಅಂದವನ್ನು ರೇಶಿಮೆಯ ನೂಲು ಹೆಚ್ಚಿಸುತ್ತದೆ.
Published On - 5:48 pm, Tue, 6 August 24