ಯುದ್ಧದ ಉದ್ವಿಗ್ನತೆ: ದೇಶಾದ್ಯಂತ ನಡೆದ ಮಾಕ್​ ಡ್ರಿಲ್​ ಪ್ರದರ್ಶನ ಹೇಗಿತ್ತು ನೋಡಿ

Updated on: May 07, 2025 | 10:04 PM

ಪಾಕಿಸ್ತಾನದೊಂದಿಗಿನ ಸಂಭಾವ್ಯ ಯುದ್ಧದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಮಾಕ್ ಡ್ರಿಲ್ ನಡೆಯಿತು. ಗೃಹ ಸಚಿವಾಲಯದ ನಿರ್ದೇಶನದಂತೆ, ವಿವಿಧ ರಾಜ್ಯಗಳಲ್ಲಿ ವಾಯುದಾಳಿ, ಭೂಕಂಪ, ಇತರ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ಪರೀಕ್ಷಿಸಲಾಯಿತು. ಬೆಂಗಳೂರು, ಮುಂಬೈ, ಲಕ್ನೋ ಸೇರಿದಂತೆ ಹಲವು ನಗರಗಳಲ್ಲಿ ಅಣಕು ಡ್ರಿಲ್‌ಗಳು ನಡೆದು, ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ಹಾಗೂ ತುರ್ತು ಸೇವೆಗಳನ್ನು ಸಮರ್ಥವಾಗಿ ನಿರ್ವಹಿಸುವುದನ್ನು ಅಭ್ಯಾಸ ಮಾಡಲಾಯಿತು.

1 / 11
ಪಾಕಿಸ್ತಾನದ ಜೊತೆಗಿನ ಯುದ್ಧದ ಸಾಧ್ಯತೆಯ ನಡುವೆ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌  ನಡೆಸಲು ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಮಾಕ್​ ಡ್ರೀಲ್​ ಹೇಗೆ ನಡೆಯಿತು ಫೋಟೋಸ್​ ನೋಡಿ.

2 / 11
ಗೃಹ ಸಚಿವಾಲಯ ಆದೇಶದಂತೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಣಕು ಡ್ರಿಲ್‌ ನಡೆಯಿತು. ಮಾಕ್​ ಡ್ರಿಲ್​ನ ಭಾಗವಾಗಿ ನಗರದಾದ್ಯಂತ ವಿದ್ಯುತ್ ಕಡಿತಗೊಳಿಸಲಾಗಿದೆ.

3 / 11
ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಕ್​ ಡ್ರಿಲ್​ ನಡೆಯಿತು. ಲಕ್ನೋ ರಿಸರ್ವ್ ಪೊಲೀಸ್ ಠಾಣೆ ಆವರಣದಲ್ಲಿ ಮಾಕ್​ ಡ್ರಿಲ್​ ನಡೆಯಿತು. ಈ ಮಾಕ್​ ಡ್ರಿಲ್​ನಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೀಕ್ಷಿಸಿದರು.

4 / 11
ಪಂಜಾಬ್ ರಾಜ್ಯದ ಬಟಿಂಡಾ ರೈಲ್ವೆ ನಿಲ್ದಾಣದಲ್ಲಿ ಸಮಗ್ರ ನಾಗರಿಕ ರಕ್ಷಣಾ ಮಾಕ್​ ಡ್ರಿಲ್ ನಡೆಯಿತು. ಒಂದು ವೇಳೆ ದಾಳಿಯಾದರೇ ಯಾವ ರೀತಿಯಾಗಿ ಸುರಕ್ಷಿತ ಸ್ಥಳಗಳನ್ನು ತಲುಪಬೇಕು. ಮತ್ತು ಯಾವ ರೀತಿ ರಕ್ಷಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕರಿಗೆ ವಿವರಿಸಲಾಯಿತು.

5 / 11
ಒಡಿಶಾದ ಭುವನೇಶ್ವರದಲ್ಲಿ ಮಾಕ್​ ಡ್ರಿಲ್ ನಡೆಯಿತು. ದಾಳಿಯ ಸೈರನ್ ಮೊಳಗಿದಾಗ ಯಾವ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು? ಈ ವೇಳೆ ರಕ್ಷಣಾ ಕಾರ್ಯಾಚರಣೆ ಯಾವ ರೀತಿ ನಡೆಯುತ್ತದೆ ಎಂದು ಸಾರ್ವಜನಿಕರಿಗೆ ವಿವರಿಸಲಾಯಿತು.

6 / 11
ರಾಜಸ್ಥಾನದ ಬಾರ್ಮರ್‌ನಲ್ಲಿ ಮಾಕ್​ ಡ್ರಿಲ್​ ನಡೆಯಿತು. ವಾಯುದಾಳಿಯಾದ ಸಂದರ್ಭದಲ್ಲಿ  ಗಾಯಗೊಂಡವರನ್ನು ಯಾವ ರೀತಿಯಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ? ಮೃತದೇಹಗಳನ್ನು ಹೇಗೆ ಸಾಗಿಸಲಾಗುತ್ತದೆ ಎಂಬುವುದರ ಬಗ್ಗೆ ಮಾಕ್​ ಡ್ರಿಲ್​ ಮಾಡಲಾಯಿತು.

7 / 11
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಮಾಕ್​ ಡ್ರಿಲ್ ನಡೆಯಿತು.

8 / 11
ಗೋವಾದ ಪಣಜಿಯಲ್ಲಿ ಸಮುದ್ರದಲ್ಲಿ ಮಾಕ್​ ಡ್ರಿಲ್​ ನಡೆಯಿತು. ಕರಾವಳಿ ಪಡೆ ಸಾರ್ವಜನಿಕರ ರಕ್ಷಣೆಗಾಗಿ ಯಾವ ರೀತಿ ಸನ್ನದ್ಧವಾಗಿದೆ ಎಂದು ತೋರಿಸಿತು.

9 / 11
ಕೇಂದ್ರ ಸರ್ಕಾರದ ಸೂಚನೆಯಂತೆ ಬೆಂಗಳೂರಿನಲ್ಲಿ ಮಾಕ್​ ಡ್ರಿಲ್​ ನಡೆಯಿತು. ಮಾಕ್​ ಡ್ರಿಲ್​ ಭಾಗವಾಗಿ ಹಲಸೂರಿನ ಅಗ್ನಿಶಾಮಕ ಠಾಣೆ ಮೈದಾನದಲ್ಲಿ ಲೈಟ್​​ಗಳನ್ನು ಆಫ್ ಮಾಡಲಾಗಿತ್ತು. ಬಳಿಕ ಸಿವಿಲ್ ಡಿಫೆನ್ಸ್ ಸಿಬ್ಬಂದಿಯಿಂದ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ನೆರವೇರಿತು. ಎರಡು ನಿಮಿಷ ಸೈರನ್ ಮೊಳಗಿಸಿ ಲೈಟ್ ಆಫ್ ಮಾಡಿ ಅಣಕು ಪ್ರದರ್ಶನ ಮಾಡಿದರು.

10 / 11
ಮಹಾರಾಷ್ಟ್ರದ ಮುಂಬೈನ ಕ್ರಾಸ್ ಮೈದಾನದಲ್ಲಿ ಅಗ್ನಿ ಶಾಮಕದಳ ಮಾಕ್​ ಡ್ರಿಲ್​ ನಡೆಯಿತು. ಕಟ್ಟಡದ ಮೇಲೆ ಸಿಲುಕಿಕೊಂಡವರನ್ನು ಹೇಗೆ ರಕ್ಷಿಸಲಾಗುತ್ತದೆ ಎಂಬುವುದನ್ನು ಅಣುಕು ಪ್ರದರ್ಶನ ಮಾಡಲಾಯಿತು.

11 / 11
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಮಾಕ್​ ಡ್ರಿಲ್ ನಡೆಯಿತು.

Published On - 9:59 pm, Wed, 7 May 25