Updated on: Nov 18, 2022 | 6:25 AM
ನಟಿ ನಯನತಾರಾ ಅವರು ಇಂದು (ನವೆಂಬರ್ 18) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈಗ 38 ವರ್ಷ ವಯಸ್ಸು. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯಗಳು ಬರುತ್ತಿವೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಟಿಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ.
ನಯನತಾರಾ ಪಾಲಿಗೆ ಈ ಬರ್ತ್ಡೇ ತುಂಬಾ ವಿಶೇಷವಾಗಿದೆ. ಅವರು ಈ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಮದುವೆ ಆದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ನಯನತಾರಾ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಇದು ಕೂಡ ಅವರ ಖುಷಿ ಹೆಚ್ಚಿಸಿದೆ.
ನಯನತಾರಾ ಅವರ ಪಾಲಿಗೆ ಇದು ವಿಶೇಷ ಹಾಗೂ ಅಪರೂಪದ ಬರ್ತ್ಡೇ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಬರ್ತ್ಡೇ ಆಚರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಯನತಾರಾ ಅವರು ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ ನಾಯಕಿ. ತಮಿಳಿನ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.