ಖ್ಯಾತ ನಟಿ ನಯನತಾರಾ ಅವರು ಇಂದು (ಜೂನ್ 9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜೊತೆ ಅವರು ಹಸೆಮಣೆ ಏರಿದ್ದಾರೆ. ಮಹಾಬಲಿಪುರಂನಲ್ಲಿ ಇವರ ಮದುವೆ ನೆರವೇರಿದೆ.
ಅನೇಕ ಗಣ್ಯರು ಮತ್ತು ಆಪ್ತರನ್ನು ಮದುವೆಗೆ ಆಹ್ವಾನಿಸಲಾಗಿದೆ. ಸಮಂತಾ, ರಜನಿಕಾಂತ್, ಎಂ.ಕೆ. ಸ್ಟಾಲಿನ್ ಸೇರಿದಂತೆ ಅನೇಕರು ಬಂದು ನವ ಜೋಡಿಗೆ ಶುಭ ಹಾರೈಸಲಿದ್ದಾರೆ ಎಂದು ವರದಿ ಆಗಿದೆ. ಶೀಘ್ರದಲ್ಲೇ ಮದುವೆಯ ಫೋಟೋಗಳು ಹೊರಬರಲಿವೆ.
ಹಲವು ವರ್ಷಗಳಿಂದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಅನೇಕ ಫೋಟೋಗಳೇ ಸಾಕ್ಷಿ. ಇಂದು ಅವರ ಪ್ರೇಮಕ್ಕೆ ಮದುವೆಯ ಮುದ್ರೆ ಬಿದ್ದಿದೆ. ಈ ಪ್ರೀತಿಗೆ ಎರಡೂ ಕುಟುಂಬದವರ ಒಪ್ಪಿಗೆ ಸಿಕ್ಕಿದೆ.
ಬಹುಭಾಷೆಯಲ್ಲಿ ನಟಿ ನಯನತಾರಾ ಅವರು ಫೇಮಸ್. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ಸೂಪರ್’. ಉಪೇಂದ್ರ ನಿರ್ದೇಶಿಸಿದ ಆ ಸಿನಿಮಾ 2010ರಲ್ಲಿ ತೆರೆಕಂಡಿತು. ಆ ಬಳಿಕ ಕನ್ನಡದ ಬೇರೆ ಯಾವುದೇ ಚಿತ್ರದಲ್ಲೂ ನಯನತಾರಾ ನಟಿಸಿಲ್ಲ.
ತಮಿಳು ಚಿತ್ರರಂಗದಲ್ಲಿ ನಿರ್ದೇಶಕನಾಗಿ ವಿಘ್ನೇಶ್ ಶಿವನ್ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕನಾಗಿ, ಗೀತರಚನಕಾರನಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ‘ನಾನುಂ ರೌಡಿ ಧಾನ್’, ‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜತೆಯಾಗಿ ಕೆಲಸ ಮಾಡಿದ್ದಾರೆ.
Published On - 10:15 am, Thu, 9 June 22