ಇತ್ತೀಚೆಗೆ ಎಲ್ಲರೂ ತಮ್ಮ ಮಗುವಿಗೆ ನಾಮಕರಣ ಮಾಡುವಾಗ ಫ್ಯಾನ್ಸಿ ಹೆಸರನ್ನು ಹುಡಕಲು ಬಯಸುತ್ತಾರೆ. ಎಲ್ಲೂ ಕೇಳಿರದ ಹೆಸರುಗಳನ್ನು ಇಡಲು ಆದ್ಯತೆ ನೀಡುತ್ತಾರೆ. ಈಗ ನೇಹಾ ಗೌಡ ಅವರು ತುಂಬಾನೇ ಸಾಂಪ್ರದಾಯಿಕ ಹೆಸರಿಟ್ಟು ಗಮನ ಸೆಳೆದಿದ್ದಾರೆ.
ನೇಹಾ ಗೌಡ ಅವರು ತಮ್ಮ ಮಗಳಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡೋ ಈ ಸಮಯದಲ್ಲಿ ನೇಹಾ ಗೌಡ ಅವರು ಸಾಂಪ್ರದಾಯಿಕ ಹೆಸರಿಟ್ಟಿದ್ದಾರೆ.
ಶಾರದೆ ಎಂಬುದು ವಿದ್ಯಾ ದೇವತೆಯ ಹೆಸರು. ಅವರು ಈ ಹೆಸರನ್ನು ಇಟ್ಟಿದ್ದಕ್ಕೆ ಅನೇಕರು ಖುಷಿಪಟ್ಟಿದ್ದಾರೆ. ‘ಹೆಸರು ಸಾಂಪ್ರದಾಯಿಕವಾಗಿದೆ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದಾರೆ. ಆದರೆ, ನೀವು ಮಾತ್ರ ಈ ರೀತಿಯ ಒಳ್ಳೆಯ ಹೆಸರನ್ನು ಇಟ್ಟಿದ್ದೀರಿ. ಇದು ನಿಜಕ್ಕೂ ಖುಷಿಯ ವಿಚಾರ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇನ್ನಷ್ಟು ಮಗಳ ಫೋಟೋ ಹಂಚಿಕೊಳ್ಳಲು ಕೋರಿದ್ದಾರೆ.
ನೇಹಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆಗಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರವೇ ಇದ್ದಾರೆ. ಅವರು ಮತ್ತೆ ಕಿರುತೆರೆಗೆ ಬರಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.
Published On - 2:38 pm, Mon, 24 March 25