
ನೆನಪಿರಲಿ ಪ್ರೇಮ್ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಅವರ ಬಾಡಿ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

ನೆನಪಿರಲಿ ಪ್ರೇಮ್ ಅವರು ಸದಾ ಚಾಕೋಲೇಟ್ ಬಾಯ್ ರೀತಿ ಕಾಣಿಸಿಕೊಂಡಿದ್ದು ಹೆಚ್ಚು. ಅವರು ಫಿಟ್ ಆಗಿರೋಕೆ ಜಿಮ್ನಲ್ಲಿ ವರ್ಕೌಟ್ ಮಾಡಿದ್ದು ಇದೆ. ಈಗ ಅವರ ಹೊಸ ಫೋಟೋಗಳನ್ನು ನೋಡಿ ಎಲ್ಲರೂ ಕಣ್ಣರಳಿಸಿದ್ದಾರೆ.

ಪ್ರೇಮ್ ಅವರು ಸಿಕ್ಸ್ ಪ್ಯಾಕ್ ಮೂಲಕ ಮಿಂಚಿದ್ದಾರೆ. ಅವರ ಫೋಟೋಗಳನ್ನು ಕಂಡು ಫ್ಯಾನ್ಸ್ ಹೌಹಾರಿದ್ದಾರೆ. ‘ಇವರೇನಾ ಪ್ರೇಮ್’ ಎಂದು ಕಣ್ಣರಳಿಸಿದ್ದಾರೆ. ಪ್ರೇಮ್ ಅವರ ಡೆಡಿಕೇಷನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಕೆಲವರು ಪ್ರೇಮ್ ಅವರನ್ನು ಬಾಲಿವುಡ್ನ ಹೃತಿಕ್ ರೋಷನ್ಗೆ ಹೋಲಿಕೆ ಮಾಡಿದ್ದಾರೆ. ಹೃತಿಕ್ ಅವರು ‘ವಾರ್’ ಚಿತ್ರದಲ್ಲಿ ಇದೇ ರೀತಿಯ ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದರು. ಇಬ್ಬರ ಮಧ್ಯೆ ಹೋಲಿಕೆ ಮಾಡಲಾಗುತ್ತಿದೆ.

ಪ್ರೇಮ್ ಅವರಿಗೆ ಈಗ 48 ವರ್ಷ. ಈ ವಯಸ್ಸಿನಲ್ಲಿ ಅವರು ಜಿಮ್ನಲ್ಲಿ ಇಷ್ಟು ಕಸರತ್ತು ಮಾಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ.