Updated on: Feb 28, 2023 | 6:44 PM
ಚಿತ್ರದುರ್ಗ ನಗರ ಬಳಿಯ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ. ಈವರೆಗೆ ಚಿರತೆಗಳು, ಕರಡಿಗಳು ಮತ್ತು ಜಿಂಕೆಗಳು ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಮಾತ್ರ ಹೊಂದಿದ್ದ ಮಿನಿ ಝೂಗೆ ಇದೀಗ ಹೊಸದಾಗಿ ಎರಡು ಹೊಸ ಹುಲಿಗಳು ಸೇರಿಕೊಂಡಿವೆ.
ಅಂತೆಯೇ ವಿವಿಧ ಬಗೆಯ ಪಕ್ಷಿಗಳನ್ನು ಸಹ ತರಲಾಗಿದೆ. ಇದೇ ಮೊದಲ ಬಾರಿಗೆ ಕೋಟೆನಾಡಿನ ಝೂನಲ್ಲಿ ಹುಲಿ ಮನೆ ನಿರ್ಮಾಣ ಆಗಿದ್ದು, ಎರಡು ಹುಲಿಗಳನ್ನು ತರಲಾಗಿದೆ. ಹೀಗಾಗಿ ದುರ್ಗದ ಜನರು ಆಡುಮಲ್ಲೇಶ್ವರ ಝೂ ಗೆ ಆಗಮಿಸಿ ಹುಲಿಗಳ ವೀಕ್ಷಣೆ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಫಂಡ್ನಲ್ಲಿ ಸುಮಾರು 3ಕೋಟಿ ರೂಪಾಯಿ ವೆಚ್ಚದಲ್ಲಿ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಪಡಿಸಲಾಗಿದೆ. ಹುಲಿ ಮನೆ, ಪಕ್ಷಿ ಮನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಹುಲಿಗಳ ವೀಕ್ಷಣೆಗೆ ಬಂದಿರುವ ಜನರು. ಹೊಸ ಹುಲಿಗಳ ವೀಕ್ಷಿಸಿ ಖುಷಿ ಪಡುತ್ತಿರುವ ದುರ್ಗದ ಮಂದಿ. ಕರಡಿಗಳ ಆಟ, ಚಿರತೆಗಳ ಚಿನ್ನಾಟ, ಪಕ್ಷಿಗಳ ಕಲರವ ಕಂಡು ಎಂಜಾಯ್ ಮಾಡುತ್ತಿದ್ದಾರೆ. ಪ್ರಾಣಿ ಪ್ರಿಯರು.
ಇದೀಗ ಮೈಸೂರಿನಿಂದ ಒಂದು ಹೆಣ್ಣು, ಒಂದು ಗಂಡು ಸೇರಿ ಎರಡು ಬೆಂಗಾಲ್ ಟೈಗರ್ಗಳು ಹಾಗೂ ವಿವಿಧ
ಒಟ್ಟಾರೆಯಾಗಿ 2 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಕೋಟೆನಾಡಿನ ಆಡುಮಲ್ಲೇಶ್ವರ ಝೂ ಸದ್ಯ ಒಂದು ಹಂತಕ್ಕೆ ಅಭಿವೃದ್ಧಿ ಆಗಿದೆ. ಅಂತೆಯೇ ಜಿಬ್ರಾ, ಲಯನ್ ಸೇರಿ ಇತರೆ ಪ್ರಾಣಿಗಳು ಝೂ ಸೇರಬೇಕಿದೆ. ಶೀಘ್ರ ಸಮಗ್ರ ಅಭಿವೃದ್ಧಿ ಮೂಲಕ ಉತ್ತಮ ಪ್ರವಾಸಿ ತಾಣವಾಗಬೇಕು ಎಂಬುದು ದುರ್ಗದ ಜನರ ಆಗ್ರಹ.