‘ಆರ್ಆರ್ಆರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ್ದು ಗೊತ್ತೇ ಇದೆ. ಆದರೆ ಈ ಚಿತ್ರ ತಮಗೆ ಇಷ್ಟ ಆಗಿಲ್ಲ ಎಂದು ನಟಿ ನಿಕೇಶಾ ಪಟೇಲ್ ನೇರವಾಗಿ ಹೇಳಿದ್ದಾರೆ.
‘ಈಗತಾನೇ ಆರ್ಆರ್ಆರ್’ ಸಿನಿಮಾ ನೋಡಿದೆ. ಆ ಚಿತ್ರ ನನಗೆ ಇಷ್ಟ ಆಗಲಿಲ್ಲ. ನೋಡಿದ ಎಲ್ಲ ಸಿನಿಮಾವೂ ಇಷ್ಟ ಆಗಬೇಕು ಎಂದೇನೂ ಇಲ್ಲ. ಎಲ್ಲರ ಅಭಿಪ್ರಾಯವೂ ಬೇರೆ’ ಎಂದು ನಿಕೇಶಾ ಪಟೇಲ್ ಟ್ವೀಟ್ ಮಾಡಿದ್ದಾರೆ.
ಸಿನಿಪ್ರಿಯರು ‘ಆರ್ಆರ್ಆರ್’ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಆದರೆ ನಿಕೇಶಾ ಪಟೇಲ್ ಈ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಟ್ವೀಟ್ ಮಾಡಿರುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಹಾಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
‘ಪ್ರಚಾರ ಪಡೆಯಲು ಈ ರೀತಿ ಟ್ವೀಟ್ ಮಾಡಬೇಡಿ. ಪ್ರತಿಭೆಯಿಂದ ಗುರುತಿಸಿಕೊಳ್ಳಿ. ನಿಮ್ಮ ಸಿನಿಮಾಗಳಲ್ಲಿ ಕೆಟ್ಟ ನಟನೆಯನ್ನು ನಾವು ನೋಡಿದ್ದೇವೆ’ ಎಂದು ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ.
2010ರಿಂದಲೂ ನಿಕೇಶಾ ಪಟೇಲ್ ಅವರು ಚಿತ್ರರಂಗದಲ್ಲಿ ಇದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ. ‘ನರಸಿಂಹ’, ‘ವರದನಾಯಕ’ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
Published On - 5:02 pm, Wed, 5 October 22