ಉಪ್ಪಿ ಮಕ್ಕಳು ಹೇಗಿದ್ದಾರೆ ನೋಡಿ; ಮಿಂಚಿದ ಆಯುಷ್-ಐಶ್ವರ್ಯಾ

Updated on: May 27, 2026 | 10:29 AM

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. ಇಡೀ ಉಪ್ಪಿ ಕುಟುಂಬ ಈ ಸಂಭ್ರಮದಲ್ಲಿ ಭಾಗವಹಿಸಿತ್ತು. ಉಪೇಂದ್ರ-ಪ್ರಿಯಾಂಕಾ ದಂಪತಿ ಜೊತೆಗೆ ಆಯುಷ್ ಮತ್ತು ಐಶ್ವರ್ಯಾ ಎಲ್ಲರ ಗಮನ ಸೆಳೆದರು. ಸದ್ಯ, ಈ ಕುಟುಂಬದ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಂಭ್ರಮ ಹೆಚ್ಚಿಸಿದೆ.

1 / 5
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ, ಯುವ ನಟ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥವು ಇತ್ತೀಚೆಗೆ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದ ಸುಂದರ ಕ್ಷಣಕ್ಕೆ ಇಡೀ ಉಪ್ಪಿ ಕುಟುಂಬ ಸಾಕ್ಷಿಯಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ, ಯುವ ನಟ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥವು ಇತ್ತೀಚೆಗೆ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಈ ಸಂಭ್ರಮದ ಸುಂದರ ಕ್ಷಣಕ್ಕೆ ಇಡೀ ಉಪ್ಪಿ ಕುಟುಂಬ ಸಾಕ್ಷಿಯಾಗಿದೆ.

2 / 5

ಈ ಅಪರೂಪದ ಕೌಟುಂಬಿಕ ಸಮಾರಂಭದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿ ಜೊತೆಯಾಗಿ ಭಾಗವಹಿಸಿದ್ದರು. ಚಿತ್ರದಲ್ಲಿರುವಂತೆ ಇಡೀ ಕುಟುಂಬವು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದು, ನಿಶ್ಚಿತಾರ್ಥದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

3 / 5

ವಿಶೇಷವೆಂದರೆ, ಉಪೇಂದ್ರ ಅವರ ಮಗ ಆಯುಷ್ ಹಾಗೂ ಮಗಳು ಐಶ್ವರ್ಯಾ ಇಬ್ಬರೂ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಸೋದರನ ಹೊಸ ಜೀವನದ ಆರಂಭಕ್ಕೆ ಸಾಕ್ಷಿಯಾಗಲು ಇವರಿಬ್ಬರು ಸಡಗರದಿಂದ ಪಾಲ್ಗೊಂಡು ಹಾರೈಸಿದ್ದಾರೆ.

4 / 5

ಉಪ್ಪಿ ಮಗ ಆಯುಷ್ ಚಿತ್ರರಂಗದತ್ತ ಆಸಕ್ತಿ ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಮಗಳು ಐಶ್ವರ್ಯಾ ಈಗಾಗಲೇ ಬಾಲನಟಿಯಾಗಿ ತಾಯಿಯ ಜೊತೆ ನಟಿಸಿದ್ದು, ಸದ್ಯ ವಿದ್ಯಾಭ್ಯಾಸದ ಕಡೆಗೆ ತಮ್ಮ ಗಮನ ಹರಿಸುತ್ತಿದ್ದಾರೆ.

5 / 5

ಉಪೇಂದ್ರ, ಪ್ರಿಯಾಂಕಾ, ಮಗಳು ಐಶ್ವರ್ಯಾ ಹಾಗೂ ಮಗ ಆಯುಷ್ ಒಟ್ಟಾಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Published On - 10:28 am, Wed, 27 May 26

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us