Updated on: Mar 15, 2024 | 11:14 AM
ನೀತಾ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ, ಏಷ್ಯಾದ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪತ್ನಿ ಮಾತ್ರವಲ್ಲದೆ, ತನ್ನ ಆರೋಗ್ಯಕರ ಜೀವನ ಶೈಲಿ ಮತ್ತು ಫ್ಯಾಷನ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.
60ರ ಹರೆಯದಲ್ಲಿ ಶಕ್ತಿಯುತವಾಗಿ ಓಡುತ್ತಿರುವ ನೀತಾ ನೃತ್ಯ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದಲ್ಲದೇ ನಿಯಮಿತ ಡಯಟ್ , ಪ್ರತಿದಿನ ಬೆಳಿಗ್ಗೆ ವಾಕಿಂಗ್ ಹೋಗುತ್ತಾರೆ. ಉಪಾಹಾರಕ್ಕಾಗಿ ಧಾನ್ಯಗಳು, ಹಣ್ಣು ಮತ್ತು ತಾಜಾ ತರಕಾರಿಗಳನ್ನು ಮಾತ್ರ ಸೇವಿಸುತ್ತಾರೆ.
ಮತ್ತೊಂದು ವಿಶೇಷತೆ ಎಂದರೆ ಬೆಳಗ್ಗಿನ ಉಪಹಾರದ ಸಮಯದಲ್ಲಿ ನೀತಾ ಅಂಬಾನಿಯವರು ಮಿಸ್ ಮಾಡ್ದೆ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಈ ಮೂಲಕ 60 ರ ವಯಸ್ಸಲ್ಲೂ ನೀತಾ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ.
ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಬೀಟ್ರೂಟ್ ಜ್ಯೂಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಜ್ಯೂಸ್ ಕುಡಿಯುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ನೀತಾ ಅಂಬಾನಿ ಪ್ರತಿದಿನ ನಿಂಬೆ ರಸ ಮತ್ತು ಪುದೀನಾವನ್ನು ಬೆರೆಸಿದ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಇದು ಅವರ ಚರ್ಮದ ಆರೈಕೆಗೂ ಸಹಾಯ ಮಾಡುತ್ತದೆ.