Nita Ambani: 60 ರ ವಯಸ್ಸಲ್ಲೂ ಯಂಗ್ ಆಗಿ ಕಾಣಲು ನೀತಾ ಅಂಬಾನಿ ಪ್ರತೀ ದಿನ ಈ ಜ್ಯೂಸ್ ಕುಡಿಯುತ್ತಾರೆ!
ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.
Updated on: Mar 15, 2024 | 11:14 AM

ನೀತಾ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ, ಏಷ್ಯಾದ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪತ್ನಿ ಮಾತ್ರವಲ್ಲದೆ, ತನ್ನ ಆರೋಗ್ಯಕರ ಜೀವನ ಶೈಲಿ ಮತ್ತು ಫ್ಯಾಷನ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮಿಂಚಿದ್ದು, 60 ವಯಸ್ಸಿನಲ್ಲೂ ನೀತಾ ಅಂಬಾನಿಯ ಬ್ಯೂಟಿ ಕಂಡು ಎಲ್ಲರೂ ಫಿದಾ ಆಗಿದ್ದಾರೆ.

60ರ ಹರೆಯದಲ್ಲಿ ಶಕ್ತಿಯುತವಾಗಿ ಓಡುತ್ತಿರುವ ನೀತಾ ನೃತ್ಯ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದಲ್ಲದೇ ನಿಯಮಿತ ಡಯಟ್ , ಪ್ರತಿದಿನ ಬೆಳಿಗ್ಗೆ ವಾಕಿಂಗ್ ಹೋಗುತ್ತಾರೆ. ಉಪಾಹಾರಕ್ಕಾಗಿ ಧಾನ್ಯಗಳು, ಹಣ್ಣು ಮತ್ತು ತಾಜಾ ತರಕಾರಿಗಳನ್ನು ಮಾತ್ರ ಸೇವಿಸುತ್ತಾರೆ.

ಮತ್ತೊಂದು ವಿಶೇಷತೆ ಎಂದರೆ ಬೆಳಗ್ಗಿನ ಉಪಹಾರದ ಸಮಯದಲ್ಲಿ ನೀತಾ ಅಂಬಾನಿಯವರು ಮಿಸ್ ಮಾಡ್ದೆ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಈ ಮೂಲಕ 60 ರ ವಯಸ್ಸಲ್ಲೂ ನೀತಾ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ.

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಬೀಟ್ರೂಟ್ ಜ್ಯೂಸ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್ ಜ್ಯೂಸ್ ಕುಡಿಯುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

ನೀತಾ ಅಂಬಾನಿ ಪ್ರತಿದಿನ ನಿಂಬೆ ರಸ ಮತ್ತು ಪುದೀನಾವನ್ನು ಬೆರೆಸಿದ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ. ಇದು ಅವರ ಚರ್ಮದ ಆರೈಕೆಗೂ ಸಹಾಯ ಮಾಡುತ್ತದೆ.

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More




