Ola Electric Scooter: ಓಲಾ ಸ್ಕೂಟರ್ ಬಿಡುಗಡೆ: ಕಡಿಮೆ ಬೆಲೆ, 181 ಕಿ.ಮೀ ಮೈಲೇಜ್
TV9 Web | Updated By: ಝಾಹಿರ್ ಯೂಸುಫ್
Updated on:
Aug 15, 2021 | 7:48 PM
Ola Scooter Price: ಓಲಾ ಸ್ಕೂಟರ್ನ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಾರೀ ವ್ಯತ್ಯಾಸ ಇರಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿರುವ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ದೊರೆಯಲಿದ್ದು, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹೆಚ್ಚಿನ ದರ ಇರಲಿದೆ.
1 / 9
ಓಲಾ ಕಂಪೆನಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಓಲಾ ಎಸ್ 1, ಎಸ್ 1 ಪ್ರೊ ಎಂಬ ಹೆಸರಿನ ಎರಡು ಮಾಡೆಲ್ಗಳನ್ನು ಪರಿಚಯಿಸಿದ್ದು, ಈ ಸ್ಕೂಟರ್ಗಳು 10 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
2 / 9
ಓಲಾ ಇವಿಗಳು
3 / 9
Ola Electric scooter S1: ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸಂಚಲನ ಸೃಷ್ಟಿಸಿದೆ. ಆಗಸ್ಟ್ 15 ರಂದು ಬಿಡುಗಡೆಯಾಗಿರುವ ಓಲಾ ಎಸ್1 ಹಾಗೂ ಎಸ್1 ಪ್ರೊ ಸ್ಕೂಟರ್ಗಳ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
4 / 9
ಇನ್ನು ದೆಹಲಿಯಲ್ಲಿ ಓಲಾ S1 85,099 ರೂ. ಹಾಗೆಯೇ ಓಲಾ S1 ಪ್ರೊ ಬೆಲೆ 110,149 ರೂ. ಅತ್ತ ಮಹಾರಾಷ್ಟ್ರದಲ್ಲೂ ಓಲಾ ಸ್ಕೂಟರ್ ಮೇಲೆ ಸಬ್ಸಿಡಿ ಇದ್ದು, ಅಲ್ಲಿ 94,999 ರೂ. ಹಾಗೂ 124,999 ರೂ.ನಲ್ಲಿ ಓಲಾ ಸ್ಕೂಟರ್ ಲಭ್ಯವಿದೆ.
5 / 9
ಈ ಸ್ಕೂಟರ್ 0 ಯಿಂದ 40 ಕಿ.ಮೀ ವೇಗವನ್ನು ಪಡೆಯಲು ತೆಗೆದುಕೊಳ್ಳುವ ಸಮಯ 3.6 ಸೆಕೆಂಡ್. ಹಾಗೆಯೇ 0 ದಿಂದ 60 ಕಿ.ಮೀ ವೇಗವನ್ನು 7 ಸೆಕೆಂಡ್ಗಳಲ್ಲಿ ಪಡೆಯಬಹುದಾಗಿದೆ. ಇನ್ನು ಎಸ್1 ಪ್ರೊನಲ್ಲಿ ಇದೇ ವೇಗವನ್ನು ಕೇವಲ 5 ಸೆಕೆಂಡ್ನಲ್ಲಿ ಪಡೆಯಬಹುದು.
6 / 9
S1 ಸ್ಕೂಟರ್ನಲ್ಲಿ 2.98 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ಹಾಗೂ S1 ಪ್ರೋನಲ್ಲಿ 3.97 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಯನ್ನು ಓಲಾ ಫಾಸ್ಟ್ ಚಾರ್ಜರ್ ಮೂಲಕ ಕೇವಲ 18 ನಿಮಿಷ ಚಾರ್ಜ್ ಮಾಡಿದ್ರೆ 75 ಕಿ.ಮೀ ಓಡಿಸಬಹುದು.
7 / 9
ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಎಂಬ 3 ರೈಡಿಂಗ್ ಮೋಡ್ಗಳೊಂದಿಗೆ ಹೊಂದಿರಲಿದೆ. ಆದರೆ ಎಸ್ 1 ನಾರ್ಮಲ್ ಹಾಗೂ ಸ್ಪೋರ್ಟ್ ಮೋಡ್ಗಳನ್ನು ಮಾತ್ರ ಹೊಂದಿದೆ.
8 / 9
ಓಲಾ ಸ್ಕೂಟರ್ನ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಾರೀ ವ್ಯತ್ಯಾಸ ಇರಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿರುವ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ದೊರೆಯಲಿದ್ದು, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹೆಚ್ಚಿನ ದರ ಇರಲಿದೆ.
9 / 9
ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ನ ಆರಂಭಿಕ ಬೆಲೆ, 79,999 ರೂ ( ಗುಜರಾತ್ ಶೋ ರೂಂ ಬೆಲೆ), 85,099 ರೂ (ದೆಹಲಿ ಶೋ ರೂಂ ಬೆಲೆ). ಇನ್ನು ಪ್ರೀಮಿಯಂ ಎಸ್ 1 ವೆರಿಯಂಟ್ ಸ್ಕೂಟರ್ ಬೆಲೆ 1.10 ಲಕ್ಷ ರೂ. ಅಸುಪಾಸಿನಲ್ಲಿರಲಿದೆ. ಹಾಗೆಯೇ ಸಬ್ಸಿಡಿ ಇರದ ರಾಜ್ಯಗಳಲ್ಲಿ S1 ಬೆಲೆ 99,999 ರೂ. ಹಾಗೆಯೇ S1 ಪ್ರೊ ಬೆಲೆ 129,000 ರೂ. ನಿಗದಿಪಡಿಸಲಾಗಿದೆ.