ನವೆಂಬರ್ 21ರಿಂದ ಜೀ5 ಒಟಿಟಿ ಮೂಲಕ ‘ಒಂದು ಸರಳ ಪ್ರೇಮಕಥೆ’ ಪ್ರಸಾರ

Updated on: Nov 14, 2025 | 10:00 PM

‘ಒಂದು ಸರಳ ಪ್ರೇಮಕಥೆ’ ಸಿನಿಮಾ 2024ರ ಫೆಬ್ರವರಿ 8ರಂದು ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಈಗ ಈ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಜೀ5 ಮೂಲಕ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಪ್ರಸಾರ ಆಗಲಿದೆ.

1 / 5
ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ್ದ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗೆ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ವಿನಯ್ ರಾಜ್​​ಕುಮಾರ್ ನಟನೆಯ ಈ ಸಿನಿಮಾ ನವೆಂಬರ್ 21ರಿಂದ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

2 / 5
ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್ ಒಳಗೊಂಡ ಈ ಸಿನಿಮಾಗೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಭಾರೀ‌ ಮೆಚ್ಚುಗೆ ಸಿಕ್ಕಿತ್ತು. ಒಟಿಟಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಳ್ಳುವ ನಿರೀಕ್ಷೆ ಇದೆ.

3 / 5
ನಾಯಕನಾಗಿ ವಿನಯ್, ನಾಯಕಿಯರಾಗಿ ಸ್ವಾತಿಷ್ಠ, ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ಈ ಚಿತ್ರದಲ್ಲಿ ಸಂಗೀತದ ಕುರಿತು ಕಹಾನಿ ಇದೆ.

4 / 5
ರಾಘವೇಂದ್ರ ರಾಜ್‌ಕುಮಾರ್ ಅವರು ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ, ಸಾಧುಕೋಕಿಲ, ಅರುಣಾ ಬಾಲರಾಜ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

5 / 5
ಆದಿ ಅವರ ಸಂಕಲನ, ಕಾರ್ತಿಕ್ ಅವರ ಛಾಯಾಗ್ರಹಣ ‘ಒಂದು ಸರಳ ಪ್ರೇಮಕಥೆ’ ಸಿನಿಮಾಗಿದೆ. ‘ರಾಮ್ ಮೂವೀಸ್’ ಬ್ಯಾನರ್ ಮೂಲಕ ಮೈಸೂರು ರಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.